ಮತ್ತೆ ಸತ್ಯಾಗ್ರಹದ ವೇದಿಕೆ ಏರಿದ ಕಿಮ್ಮನೆ ರತ್ನಾಕರ್! ಜುಲೈ 3 ಕ್ಕೆ ಉಪವಾಸ ಧರಣಿ! ಕಾರಣವೇನು ಗೊತ್ತಾ?

Kimmane Ratnakar takes the stage of Satyagraha again! Hunger strike on July 3! Do you know the reason?

ಮತ್ತೆ ಸತ್ಯಾಗ್ರಹದ ವೇದಿಕೆ ಏರಿದ ಕಿಮ್ಮನೆ ರತ್ನಾಕರ್! ಜುಲೈ 3 ಕ್ಕೆ ಉಪವಾಸ ಧರಣಿ! ಕಾರಣವೇನು ಗೊತ್ತಾ?

KARNATAKA NEWS/ ONLINE / Malenadu today/ Jun 29, 2023 SHIVAMOGGA NEWS

ಶಿವಮೊಗ್ಗ/ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (kimmane ratnakar) ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಭಾರಿ ಕೇಂದ್ರ ಸರಕಾರದ ವಿರುದ್ಧ ಜುಲೈ 3 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ಧಾರೆ. ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಶಿವಮೊಗ್ಗ ನಗರದ ಗಾಂಧಿ ಪಾರ್ಕಿನ ಮಹಾತ್ಮ ಗಾಂಧೀಜಿ  ಪ್ರತಿಮೆ ಬಳಿ ಮಾಜಿ ಸಚಿವರು ಉಪವಾಸ ಸತ್ಯಾಗ್ರಹ  ನಡೆಸಲಿದ್ದಾರೆ. 

ಈ ಸಂಬಂಧ ನಿನ್ನೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ಕರೆದು ಮಾತನಾಡಿದ, ಕಿಮ್ಮನೆ ರತ್ನಾಕರ್,  ಕೇಂದ್ರ ಸರಕಾರ ಕಳೆದ 9 ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು ಆದರೆ ಅದನ್ನ ಈಡೇರಿಸಿಲ್ಲ ಹೀಗಾಗಿ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಕಿಮ್ಮನೆ ರತ್ನಾಕರ್ ಆರೋಪಗಳು

ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ 9 ವರ್ಷದಲ್ಲಿ 18 ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ, ಉದ್ಯೋಗ ನೀಡುವುದಿರಲಿ, ಇರುವ ಉದ್ಯೋಗ ಕಸಿದುಕೊಂಡಿದೆ 

ಪ್ರಧಾನಿ ಮೋದಿ ಅವರು ವಿದೇಶದಲ್ಲಿ ರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮಾ ಮಾಡುತ್ತೇವೆ ಎಂದಿದ್ದರು. ಬಗ್ಗೆ ಪ್ರಶ್ನೆ ಮಾಡಿದರೆ ಬಿಜೆಪಿಯವರು ಅವರೇನು ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ. ಬರೆದುಕೊಟ್ಟರೆ ಮಾತ್ರ ಕೊಡಬೇಕೆ? ಮಾತು ಕೊಟ್ಟರೆ ಕೊಡಬಾರದೆ 

ದೇಶದ ಎಲ್ಲ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದದ್ದು ಪ್ರಧಾನಿ ಅವರ ಜವಾಬ್ದಾರಿ. ಈಗ ಎಂದು ರಾಜ್ಯ ಸರಕಾರಕ್ಕೆ ಅಕ್ಕಿ ಕೊಡಲ್ಲ ಹೇಳುತ್ತಿ ದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುವು ದಿಲ್ಲವೇ ಎಂದು ಪ್ರಶ್ನಿಸಿದರು.