karnataka police : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಭತ್ಯೆ ಹೆಚ್ಚಳ | ರಾಜ್ಯ ಸರ್ಕಾರ ಆದೇಶ
karnataka police : ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪಾವತಿಸುತ್ತಿರುವ ಆಹಾರ ಭತ್ಯೆಯ ದರ ಹೆಚ್ಚಿಸಬೇಕೆಂಬ ಒತ್ತಡದ ಬೆನ್ನಲ್ಲೇ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರದ ಆದೇಶದಲ್ಲಿ ಗುಣಮಟ್ಟದ ಆರೋಗ್ಯಕರ ಆಹಾರವನ್ನು ಪೂರೈಸುವ ದೃಷ್ಟಿಯಿಂದ ಹಬ್ಬಹರಿ ದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಸ್ತುತ ಪಾವತಿಸುತ್ತಿರುವ ಆಹಾರ ಭತ್ಯೆ (Food Allowance) ದರವನ್ನು ರೂ.200/-ರಿಂದ ರೂ.300/-ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ.
ಹಬ್ಬಹರಿ ದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಸ್ತುತ ಪಾವತಿಸುತ್ತಿರುವ ಆಹಾರ ಭತ್ಯೆ Pel (Food Allowance) ದರವನ್ನು ರೂ.100/- ರಿಂದ ರೂ.200ಗಳಿಗೆ ಹೆಚ್ಚಿಸಲು ಮಂಜೂರಾತಿ ನೀಡಲಾಗಿದೆ.
ಈ ಹಿಂದೆ ಪೊಲಿಸ್ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿರುವುದರಿಂದ, ಆಹಾರ ಧಾನ್ಯಗಳ ಮತ್ತು ಊಟ/ತಿಂಡಿಗಳಿಗೆ ದಿನವೊಂದಕ್ಕೆ ಪಾವತಿಸುತ್ತಿರುವ ರೂ.200/- ಆಹಾರ ಭತ್ಯೆ ಮೊತ್ತವು ತೀರಾ ಕಡಿಮೆಯಿದ್ದು, ವಾಸ್ತವವಾಗಿ ಒಬ್ಬರಿಗೆ ದಿನವೊಂದಕ್ಕೆ ಒಂದು ತಿಂಡಿ, ಎರಡು ಊಟ ಹಾಗೂ ಎರಡು ಬಾರಿ ಕಾಫಿ/ಟಿ ಒದಗಿಸಲು ಕನಿಷ್ಠ ರೂ.300/-ಗಳು ತಗಲುತ್ತದೆ. ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಆಹಾರ ಭತ್ಯೆಯನ್ನು ನಿಗದಿಪಡಿಸಿರುವ ಆದೇಶವನ್ನು ಹೊರಡಿಸಿ 04 ವರ್ಷಗಳು ಕಳೆದಿದ್ದು, ಈ ಅವಧಿಯಲ್ಲಿ ಆಹಾರ ಪದಾರ್ಥಗಳ ಬೆಲೆಗಳಲ್ಲಿ ಗಣನೀಯವಾಗಿ ಏರಿಕೆಯಾಗಿರುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಹಾರ ಭತ್ಯೆಯ ದರ ರೂ.200/- ರಿಂದ ರೂ.300/- ಗಳಿಗೆ ಹೆಚ್ಚಿಸಿದ್ದಲ್ಲಿ ಆಗುವ ಆರ್ಥಿಕ ಪರಿಣಾಮದ ಬಗ್ಗೆ 03 ವರ್ಷಗಳ ಮಾಹಿತಿ ವಿವರಗಳ ಪ್ರಸ್ಥಾಪ ಸಲ್ಲಿಸಿದ್ದರು.

2022-23 ರಿಂದ 2024-25ವರೆಗಿನ ಆಹಾರ ಭತ್ಯೆಯನ್ನು ವಿತರಿಸಿರುವ ಸರಾಸರಿ ರೂ.22,59,41,479/-( ಆಗಿರುತ್ತದೆ. ಈಗ ಆಹಾರ ಭತ್ಯೆ ದರ ರೂ.200/- ಇದ್ದು ಅದನ್ನು ರೂ.300/- ಕೆ ಹೆಚ್ಚಳ ಮಾಡಿದ್ದಲ್ಲಿ ರೂ.33,89,12,219/- ಗಳಾಗುತ್ತದೆ. ಆದ್ದರಿಂದ ಚಾಲ್ತಿಯಲ್ಲಿರುವ ಆಹಾರ ಭತ್ಯೆ ರೂ.200/- ರಿಂದ 300/- ಕ್ಕೆ 16 ಹೆಚ್ಚಿಸುವುದರಿಂದ ವಾರ್ಷಿಕವಾಗಿ ಸರಾಸರಿ ರೂ.11,29,70,740/- ಹೆಚ್ಚುವರಿ ಆರ್ಥಿಕ ಪರಿಣಾಮ ಬೀರಬಹುದಾಗಿರುತ್ತದೆ ಎಂದು ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
karnataka police : ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆ ಹಿನ್ನಲೆಯಲ್ಲಿ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಹಬ್ಬಹರಿ ದಿನಗಳು, ವಿಶೇಷ ಹಾಗೂ ಚುನಾವಣಾ ಸಂದರ್ಭಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಸ್ತುತ ಪಾವತಿಸುತ್ತಿರುವ ಆಹಾರ ಭತ್ಯೆ (Food Allowance) ದರವನ್ನು ರೂ.200/- ರಿಂದ ರೂ.300ಗಳಿಗೆ ಹೆಚ್ಚಿಸಿ ಆದೇಶಿಸಿದೆ.