indian test cricket : ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ | ಯುವ ಆಟಗಾರರಿಗೆ ಮಣೆ.

prathapa thirthahalli
Prathapa thirthahalli - content producer

indian test cricket : ಜೂನ್ 20 ರಂದು ಹೆಡಿಂಗ್ಲಿಯಲ್ಲಿ  ಭಾರತ ಮತ್ತು ಇಂಗ್ಲೆಂಡ್​ ಟೆಸ್ಟ್ ಸರಣಿ ಆರಂಭವಾಗಲಿದೆ. ಇಂಗ್ಲೆೆಂಡ್ ವಿರುದ್ದ ಟೆಸ್ಟ್ ಸರಣಿಗೆ  ಬಿಸಿಸಿಐ ಆಯ್ಕೆ ಸಮಿತಿ ಇಂದು ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಭಾರತ ಟೆಸ್ಟ್ ಟೀಂ ನ  37 ನೇ ಕ್ಯಾಪ್ಟನ್ ಆಗಿ ಶುಭಮನ್ ​ಗಿಲ್ ಆಯ್ಕೆ ಮಾಡಲಾಗಿದ್ದು, ಉಪನಾಯಕನಾಗಿ  ರಿಷಬ್​ ಪಂತ್​ ರನ್ನು ನೇಮಿಸಲಾಗಿದೆ. 

ಈಗಾಗಲೇ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್ ​ಗೆ  ನಿವೃತ್ತಿ ಘೋಷಿಸಿದ್ದಾರೆ. ಹಿರಿಯರ ಅನುಪಸ್ಥಿತಿಯಲ್ಲಿ  ಯುವ ಆಟಗಾರರಿಗೆ ಬಿಸಿಸಿಐ ಮಣೆ ಹಾಕಿದೆ.  ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಿಗೆ 18 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ 18 ಜನ ಆಟಗಾರರಿರುವ ತಂಡವನ್ನು  ಆಯ್ಕೆ ಮಾಡಿದ್ದಾರೆ. 

indian test cricket : ಈ ಬಾರಿಯ ಟೆಸ್ಟ್ ತಂಡದಲ್ಲಿ ಮೂರು ಜನ  ಕರ್ನಾಟಕದವರಿದ್ದಾರೆ. ತಂಡದಲ್ಲಿ ಕರುಣ್​ ನಾಯರ್​, ಕೆಎಲ್​ ರಾಹುಲ್​ ಹಾಗೂ ಪ್ರಸಿದ್​ ಕೃಷ್ಣ ಸ್ಥಾನ ಪಡೆದಿದ್ದಾರೆ​. ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿರುವ  ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಟ್ಟಿದ್ದು,  ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ 18  ರ ಬಳಗವನ್ನು ಸೇರಿಕೊಂಡಿದ್ದಾರೆ.  

ಶುಭಮನ್​ಗಿಲ್​ಗೆ ಇಗಾಗಲೇ 25 ವರ್ಷ ತುಂಬಿದ್ದು ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್​ ಸಾರಥ್ಯವನ್ನು ವಹಿಸಿಕೊಂಡ ಅತ್ಯಂತ ಕಿರಿಯ ಆಟಗಾರರಲ್ಲಿ ಗಿಲ್​ ಕೂಡಾ ಒಬ್ಬರಾಗಿದ್ದಾರೆ. ಹಾಗೆಯೇ ಗಿಲ್​  2024 ರಲ್ಲಿ ಜಿಂಬಾಬ್ವೆಯಲ್ಲಿ  ನಡೆದ ಟಿ 20  ಪಂದ್ಯಗಳಲ್ಲಿ ಭಾರತ ತಂಡದ  ನಾಯಕನಾಗಿ ಕಾರ್ಯ ನಿರ್ವಹಿಸಿದ ಅನುಭವಿದೆ.   ಟೆಸ್ಟ್​ನಲ್ಲಿ ಉಪನಾಯಕನಾಗಿ ಹಾಗೂ ಪ್ರಸ್ತುತ ಐಪಿಎಲ್​ನ ಗುಜರಾತ್​ ತಂಡದ ನಾಯಕನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಇದುವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ, ಗಿಲ್ 32 ಪಂದ್ಯಗಳನ್ನು ಆಡಿದ್ದು,  ಐದು ಶತಕಗಳು ಸೇರಿದಂತೆ 1,893 ರನ್‌ಗಳನ್ನು ಗಳಿಸಿದ್ದಾರೆ.

indian test cricket : ಟೆಸ್ಟ್ ಟೀಂ 18 ಆಟಗಾರರ ಬಳಗ ಇಂತಿದೆ.

ಶುಭಮನ್ ಗಿಲ್ (ನಾಯಕ),ರಿಷಭ್ ಪಂತ್ (ವಿಕೆಟ್ ಕೀಪರ್) (ಉಪನಾಯಕ), ಯಶಸ್ವಿ ಜೈಸ್ವಾಲ್ ,ಕೆಎಲ್ ರಾಹುಲ್ ,ಸಾಯಿ ಸುದರ್ಶನ್​, ಅಭಿಮನ್ಯು ಈಶ್ವರನ್​, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ , ರವೀಂದ್ರ ಜಡೇಜಾ, ಧ್ರುವ್ ಜುರೆಲ್ ,ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಎಂ.ಡಿ. ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಅರ್ಶ್ದೀಪ್ ಸಿಂಗ್,ಕುಲದೀಪ್ ಯಾದವ್, ಟೆಸ್ಟ್​ನಲ್ಲಿ ಸ್ಥಾನ ಪಡೆದಿದ್ದಾರೆ.

 

Share This Article