karachi port / ಹಮಾಸ್​ ಸ್ಟೈಲ್​ನಲ್ಲಿ ಪಾಕ್​ ದಾಳಿ , ಪ್ರತ್ಯುತ್ತರಕ್ಕೆ 3 ವಿಮಾನ ಡಮಾರ್! ಕರಾಚಿ ಬಂದರು ಮೇಲೆ ಅಟ್ಯಾಕ್ ನಿಜನಾ?

Malenadu Today

karachi port ಆಪರೇಷನ್​ ಸಿಂಧೂರ್ ಕಾರ್ಯಾಚರಣೆಯ ಬೆನ್ನಲ್ಲೆ ಪಾಕಿಸ್ತಾನ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದಂತೆ ಡ್ರೋನ್ ಹಾಗೂ ಮಿಸೈಲ್​​ ದಾಳಿ ನಡೆಸಲು ಮುಂದಾಗಿದ್ದರು. ಆದರೆ ಭಾರತೀಯ ಸೇನೆ ಪಾಕಿಸ್ತಾನದ ದಾಳಿ ಬೆನ್ನಲ್ಲೆ, ಪ್ರತ್ಯುತ್ತರ ನೀಡಿದ್ದು,  ಶತ್ರು ರಾಷ್ಟ್ರದ 3 ಜೆಟ್‌ಗಳನ್ನು ಹೊಡೆದುರುಳಿಸಿದೆ. ಭಾರತದ ಎಸ್ 400 ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕಿಸ್ತಾನದ ಡ್ರೋನ್​ ದಾಳಿಯನ್ನು ತಡೆಯಲಾಗಿದೆ. 

ನಿನ್ನೆ ಗುರುವಾರ ಪಾಕಿಸ್ತಾನ ಜಮ್ಮುವಿನ ಹಲವಾರು ಪ್ರದೇಶಗಳು ಹಾಗೂ ರಾಜಸ್ಥಾನ ಮತ್ತು ಪಂಜಾಬ್‌ನ ಕೆಲವು ಭಾಗಗಳನ್ನು ಗುರಿಯಾಗಿಸಿಕೊಂಡು ಮಿಸೈಲ್​​ ದಾಳಿ ನಡೆಸಿತು. ಇದರ ದೃಶ್ಯ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ.  ಭಾರತೀಯ ಸೇನೆ, ಪಾಕ್ ದಾಳಿಯ ಸುಳಿವು ಸಿಗುತ್ತಲೇ ತನ್ನ ಅಟ್ಯಾಕ್ ಆರಂಭಿಸಿತಷ್ಟೆ ಅಲ್ಲದೆ, ಪಾಕಿಸ್ತಾನದ ಒಂದು F-16 ಫೈಟರ್ ಜೆಟ್ ಮತ್ತು ಎರಡು JF-17 ಜೆಟ್‌ಗಳನ್ನು ಹೊಡೆದುರುಳಿಸಿದೆ. ಈ ಬಗ್ಗೆ ಇನ್ನಷ್ಟು ಅಧಿಕೃತ ವರದಿ ಬರಬೇಕಿದೆ. ಇದೇ ವೇಳೆ ಪಾಕ್​ನ ಡ್ರೋನ್​ ಒಂದು  ಜಮ್ಮು ನಾಗರಿಕ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದೆ. ಮೂಲಗಳ ಪ್ರಕಾರ, ಪಾಕಿಸ್ತಾನದ ಎಂಟು ಕ್ಷಿಪಣಿಗಳನ್ನು ಸೇನೆಯ ವಾಯು ರಕ್ಷಣಾ ವ್ಯವಸ್ಥೆಯು ತಡೆದಿದ್ದು ಮಾರ್ಗಮಧ್ಯೆದಲ್ಲಿಯೇ ಕ್ಷಿಪಣಿಗಳನ್ನು ಹೊಡೆದು ಉರುಳಿಸಿದೆ.     

- Advertisement -

ಈ ನಡುವೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸ್ತಿದ್ದು, ಇವತ್ತು ನಿನ್ನೆ ನಡೆದ ದಾಳಿ ಹಾಗೂ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ.  ಇನ್ನೊಂದೆಡೆ ನಿನ್ನೆ  ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2025 ಪಂದ್ಯವನ್ನು ಪಾಕಿಸ್ತಾನದ ದಾಳಿ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆಯಾದರೂ, ಇದಕ್ಕೆ ಕಾರಣ ಬೇರೆಯದನ್ನು ನೀಡಲಾಗಿದೆ ಎಂಬ ಮಾಹಿತಿ ಇದೆ.   

ಕರಾಚಿ ಬಂದರು ವಿಡಿಯೋ /karachi port

ಇವೆಲ್ಲದರ ನಡುವೆ ಐಎನ್​ಎಸ್​ ವಿಕ್ರಾಂತ್ ಕರಾಚಿ ಬಂದರ್​ನ ಮೇಲೆ ದಾಳಿ ನಡೆಸಿದೆ ಎಂಬ ವಿಡಿಯೋ ತಡರಾತ್ರಿಯಿಂದಲೂ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಔಟ್​ ಲುಕ್ ಮಾಧ್ಯಮ ಸಂಸ್ಥೆ ಪ್ಯಾಕ್ಟ್​ ಚೆಕ್ ನೀಡಿದ್ದು, X (ಹಿಂದೆ ಟ್ವಿಟರ್) ನಲ್ಲಿ ಹರಿದಾಡುತ್ತಿರುವ ವಿಡಿಯೋ (karachi port ) ಪಾಕಿಸ್ತಾನಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಈ ದೃಶ್ಯವೂ ಗಾಜಾದ್ದು ಎಂದು ತಿಳಿಸಲಾಗಿದೆ.  

TAGGED:
Share This Article
Leave a Comment

Leave a Reply

Your email address will not be published. Required fields are marked *