ಕಾಂತಾರ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 2022ರ ಸೆಪ್ಟೆಂಬರ್ 30ರಂದು ಬಿಡುಗಡೆಯಾದ ತಮ್ಮ ಚಿತ್ರದ ಮೂಲಕ ಕರಾವಳಿ ಭಾಗದ ಆಚಾರ ವಿಚಾರಗಳು ಮತ್ತು ದೈವಭಕ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದರು. ಕಾಂತಾರ ಚಿತ್ರದ ಯಶಸ್ಸು ಅವರಿಗೆ “ಪ್ಯಾನ್ ಇಂಡಿಯಾ ಸ್ಟಾರ್” ಸ್ಥಾನಮಾನ ತಂದುಕೊಟ್ಟಿತು ಮತ್ತು ಅವರ ನಟನೆಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು. ತುಳುನಾಡಿನ ಪ್ರಸಿದ್ಧ ಪಂಜುರ್ಲಿ ದೈವದ ಹಿನ್ನೆಲೆಯ ಕಥೆ, ಕಾಂತಾರ ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಪಂಜುರ್ಲಿ ದೈವದ ಆಶೀರ್ವಾದದಿಂದಲೇ ರಿಷಬ್ ಶೆಟ್ಟಿ ಇಷ್ಟರ ಮಟ್ಟಿಗೆ ಯಶಸ್ಸು ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು.
kanthara chapter 1 shooting : ಕಾಂತಾರ ಪ್ರೀಕ್ವೆಲ್ ಮತ್ತು ವಿವಾದಗಳು
ಕಾಂತಾರ ಚಿತ್ರದ ನಂತರ ರಿಷಬ್ ಶೆಟ್ಟಿ ಹಲವಾರು ಟೀಕೆಗಳನ್ನು ಎದುರಿಸಿದರು. ವಿಶೇಷವಾಗಿ, ಅವರು “ಕಾಂತಾರ ಪ್ರೀಕ್ವೆಲ್” (ಕಾಂತಾರ ಚಾಪ್ಟರ್ 1) ಮಾಡುವುದಾಗಿ ಘೋಷಿಸಿದಾಗ, ದೈವದ ಹೆಸರಿನಲ್ಲಿ ಹಣ ಗಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಅಲ್ಲದೆ, ರಿಷಬ್ ಶೆಟ್ಟಿಯಿಂದ ಪ್ರೇರಿತರಾದ ಕೆಲವು ರೀಲ್ಸ್ ಸ್ಟಾರ್‌ಗಳು ದೈವದ ಪಾತ್ರಗಳನ್ನು ಮಾಡಿ ಸಂಪ್ರದಾಯಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆಕ್ಷೇಪಗಳೂ ಕರಾವಳಿ ಭಾಗದಲ್ಲಿ ವ್ಯಕ್ತವಾದವು. ಈ ಕಾರಣದಿಂದಾಗಿ, ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂಬ ವಿರೋಧಗಳೂ ಕೇಳಿಬಂದವು.
ಆದರೆ, ರಿಷಬ್ ಶೆಟ್ಟಿ ಈ ಯಾವುದೇ ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ, “ಕಾಂತಾರ ಚಾಪ್ಟರ್ 1” ಚಿತ್ರದ ಶೂಟಿಂಗ್ ಆರಂಭಿಸಿದರು. ಆದರೆ, ಚಿತ್ರೀಕರಣದ ಆರಂಭದಲ್ಲಿಯೇ ಅವರಿಗೆ ಕೆಲವು ಅಡೆತಡೆಗಳು ಎದುರಾದವು.

kanthara chapter 1 shooting : ಚಿತ್ರೀಕರಣ ಆರಂಭದಲ್ಲಿ ಎದುರಾದ ಕಷ್ಟಗಳು
ಅರಣ್ಯ ನಾಶದ ಆರೋಪ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಗಳಿಗೆ ಬೆಂಕಿ ಹಚ್ಚಿ ಅರಣ್ಯ ಪ್ರದೇಶವನ್ನು ನಾಶಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ನಂತರ ಅರಣ್ಯ ಪ್ರದೇಶದಲ್ಲಿ ಅನುಮತಿ ಪಡೆದು ಶೂಟಿಂಗ್ ನಡೆಸಲಾಗಿದೆ ಎಂದು ಸಾಬೀತಾಯಿತು.
ಕೊಲ್ಲೂರಿನಲ್ಲಿ ಬಸ್ ಅಪಘಾತ: ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಸಿ, ಕೊಲ್ಲೂರಿನ ಜಡ್ಕಳ ಬಳಿ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ ಹಲವಾರು ಜೂನಿಯರ್ ಆರ್ಟಿಸ್ಟ್‌ಗಳಿಗೆ ಗಾಯಗಳಾಗಿದ್ದವು.
ಪಂಜುರ್ಲಿ ದೈವದ ಮೊರೆ ಹೋದ ರಿಷಬ್ ಶೆಟ್ಟಿ
ಚಿತ್ರೀಕರಣದ ಆರಂಭದಲ್ಲಿ ಈ ಹಲವು ಕಷ್ಟಗಳನ್ನು ಎದುರಿಸಿದ ರಿಷಬ್ ಶೆಟ್ಟಿ, 2025ರ ಏಪ್ರಿಲ್ 07 ರಂದು ಪಂಜುರ್ಲಿ ದೈವದ ಮೊರೆ ಹೋದರು. ಮಂಗಳೂರಿನ ಕದ್ರಿಯಲ್ಲಿ ನಡೆಯುತ್ತಿದ್ದ ಪಂಜುರ್ಲಿ ಕೋಲದಲ್ಲಿ ಅವರು ಭಾಗವಹಿಸಿದ್ದರು. ಆಗ ಪಂಜುರ್ಲಿ ದೈವ, “ನಿಮಗೆ ಜಗತ್ತಿನೆಲ್ಲೆಡೆ ದುಷ್ಮನ್‌ಗಳಿದ್ದಾರೆ. ನಿಮ್ಮ ಕೆಲಸ ಹಾಳು ಮಾಡಲು ಸಂಚು ರೂಪಿಸಲಾಗುತ್ತಿದೆ. ನನಗೆ ಏನಾದರೂ ಸೇವೆ ಕೊಡುತ್ತೇನೆ ಎಂದು ಹರಕೆ ಕಟ್ಟಿಕೊ ಇನ್ನು ಐದು ತಿಂಗಳಲ್ಲಿ ಎಲ್ಲಾ ಸರಿಮಾಡುತ್ತೇನೆ” ಎಂದು ಅಭಯ ನೀಡಿತ್ತು.
kanthara chapter 1 shooting : ಕಳೆದ ಎರಡು ತಿಂಗಳಲ್ಲಿ ನಡೆದ ಅವಘಡಗಳು
ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿ ಅಭಯ ಪಡೆದ ನಂತರವೂ ಕಾಂತಾರ ತಂಡದಲ್ಲಿ ಕೆಲವು ಅವಘಡಗಳು ಸಂಭವಿಸಿದವು.
ಮೇ 06 – ಸಹ ಕಲಾವಿದ ಕಪಿಲ್ ಸಾವು: ಕಾಂತಾರ ಚಾಪ್ಟರ್ 1 ಚಿತ್ರದ ಸಹ ಕಲಾವಿದರಾಗಿದ್ದ ಕೇರಳ ಮೂಲದ ಕಪಿಲ್ ಎಂಬುವವರು ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿದ್ದಾಗ ಮುಳುಗಿ ಸಾವನ್ನಪ್ಪಿದರು.
ಮೇ 12 – ರಾಕೇಶ್ ಪೂಜಾರಿ ಸಾವು: ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಅವರು ಮೇ 12 ರಂದು ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ನಿಧನರಾದರು.
ಜೂನ್ 12 – ಮಿಮಿಕ್ರಿ ಆರ್ಟಿಸ್ಟ್ ನಿಜು ವಿಕೆ ಸಾವು: ರಾಕೇಶ್ ಪೂಜಾರಿ ನಿಧನರಾದ ಒಂದು ತಿಂಗಳ ನಂತರ, ಮಿಮಿಕ್ರಿ ಆರ್ಟಿಸ್ಟ್ ನಿಜು ವಿಕೆ ಅವರು ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು.
kanthara chapter 1 shooting ಪಂಜುರ್ಲಿ ದೈವದ ರಕ್ಷಣೆ
ಈ ಎಲ್ಲಾ ಘಟನೆಗಳು ಸಂಭವಿಸಿದರೂ, ಪಂಜುರ್ಲಿ ದೈವ ಈಗಾಗಲೇ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿ, “ನಿಮಗೆ ಸಾಕಷ್ಟು ಸಮಸ್ಯೆಗಳು ಬರುತ್ತವೆ, ಅವುಗಳನ್ನು ನಾನು ಪರಿಹರಿಸುತ್ತೇನೆ” ಎಂದು ಭರವಸೆ ನೀಡಿತ್ತು. ಅದರಂತೆ ಇಲ್ಲಿ ನಡೆದ ಯಾವುದೇ ದುರದೃಷ್ಟಕರ ಘಟನೆಗಳು ಸಹ ಶೂಟಿಂಗ್ ಸಂದರ್ಭದಲ್ಲಿ ಸಂಭವಿಸಿಲ್ಲ ಎಂಬುದು ಗಮನಾರ್ಹ.
ಗಬಡಿ ಪ್ರತಾಪ್