Husband ki…ll wife in Shikaripura: Accused absconds ಶಿಕಾರಿಪುರದಲ್ಲಿ ಪತಿಯಿಂದ ಪತ್ನಿ ಕೊ*ಲೆ: ಆರೋಪಿ ಪರಾರಿ
Shikaripura news / ಶಿವಮೊಗ್ಗ, ಜೂನ್ 12: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯಲ್ಲಿ ಪತಿಯೊಬ್ಬ ಪತ್ನಿಯನ್ನು ಚಿಮುಟದಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದು, ಪ್ರಕರಣ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
husband ki…ll wife in shikaripura

ಸೊಸೈಟಿ ಕೇರಿಯ ನಿವಾಸಿ 35 ವರ್ಷದ ಬಸವರಾಜಪ್ಪ ಎಂಬಾತ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನೆ (ಬುಧವಾರ) ಬಸವರಾಜಪ್ಪ ಮತ್ತು ಆತನ ಪತ್ನಿ ಮಂಜುಳಾ ನಡುವೆ ಜಗಳ ಆರಂಭವಾಗಿದೆ. ಮೊದಲು ಜಗಳ ಮಾಡಿ ನಂತರ ಕೆಲಕಾಲ ಸುಮ್ಮನಾಗಿದ್ದ ಆರೋಪಿ, ನಡುರಾತ್ರಿ ಮತ್ತೆ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಕೋಪಗೊಂಡ ಬಸವರಾಜಪ್ಪ, ಚಿಮುಟದಿಂದ ಪತ್ನಿ ಮಂಜುಳಾ ಅವರ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಡೆದ ಕೂಡಲೇ ಆರೋಪಿ ಬಸವರಾಜಪ್ಪ ಸ್ಥಳದಿಂದ ಪರಾರಿಯಾಗಿದ್ದಾನೆ. ಶಿಕಾರಿಪುರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
