K S Eshwarappa | ಉದ್ಯಮಿ ಮಂಜುನಾಥ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಿ? ಕೆಎಸ್​ ಈಶ್ವರಪ್ಪ

prathapa thirthahalli
Prathapa thirthahalli - content producer

K S Eshwarappa | ಪಾಕಿಸ್ತಾನ  ಕಾಶ್ಮೀರದಲ್ಲಿ ಈ ರೀತಿಯ ಕುಕ್ಕೃತ್ಯವನ್ನು ಮಾಡುವ  ಮೂಲಕ ತನ್ನ ಶವ ಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಹೊಡೆದುಕೊಂಡಿದೆ ಎಂದು ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಹೇಳಿದರು.

ಕೆ ಎಸ್​ ಈಶ್ವರಪ್ಪ ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಶಿವಮೊಗ್ಗದ ಮಂಜುನಾಥ್​ ರಾವ್ ರವರ ಮನೆಗೆ​ ಗುರುವಾರ ಭೇಟಿ ನೀಡಿ  ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಪಾಕಿಸ್ತಾನದ ಭಯೋತ್ಪಾದಕರು 27 ಜನರನ್ನು ಕಗ್ಗೊಲೆ ಮಾಡಿದ್ದು ಬಹಳ ನೋವಾಗಿದೆ. ಈ ಕುರಿತಾಗಿ ಎರಡೇ ಗಂಟೆಯಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ. ದೇಶದ್ರೋಹಿ ಪಾಕಿಸ್ತಾನಕ್ಕೆ ನೀರು ಬಿಡದಿರಲು ತೀರ್ಮಾನ ಮಾಡಿದ್ದನ್ನು ಇಡೀ ಅಖಂಡ ಭಾರತವೇ ಸ್ವಾಗತಿಸಿದೆ. ಕಾಂಗ್ರೆಸ್​ ನ ನಾಯಕರು ಈಗ ದೇಶದ ಜೊತೆ ನಿಲ್ಲಬೇಕು. ಈ ಭಯೋತ್ಪಾದಕ ಕೃತ್ಯಕ್ಕೆ ಪ್ರಧಾನಿ  ನರೇಂದ್ರ ಮೋದಿ ತಕ್ಕ ಉತ್ತರ ನೀಡಿದ್ದಾರೆ ಎಂದರು.

K S Eshwarappa : ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು

ಭಯೋದ್ಪಾದಕರ ದಾಳಿಯಲ್ಲಿ ಮೃತ ಪಟ್ಟ ಕರ್ನಾಟಕದ ಕುಟುಂಬಕ್ಕೆ ಸಿ ಎಂ ಸಿದ್ದರಾಮಯ್ಯ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಈ ವೇಳೆ ನಾನು ಸಿದ್ದರಾಮಯ್ಯನವರ ತೀರ್ಮಾನವನ್ನು ಟೀಕಿಸುವುದಿಲ್ಲ. ಆದರೆ ಕೇರಳದ ವಯನಾಡಿನಲ್ಲಾದ ದುರಂತಕ್ಕೆ ಅಲ್ಲಿನ ಸರ್ಕಾರ  25 ಲಕ್ಷ ರೂ. ಘೋಷಣೆ ಮಾಡಿತ್ತು. ಅದೇ ರೀತಿ ಈ ಘಟನೆಯಲ್ಲಿ ಮಡಿದವರಿಗೂ 25 ಲಕ್ಷ ರೂ. ಘೋಷಿಸಲಿ ಎಂದು ಒತ್ತಾಯಿಸಿದರು.

Share This Article