#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?

#Justiceforvishwas : Justice must be done for the death of Viswas, a talented student of Pace College! Do you know why? If you do politics over death, there is no excuse for it! What happened?

#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?
#Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, ಅದಕ್ಕೆ ಕ್ಷಮೆ ಎಂಬುದೇ ಇಲ್ಲ! ನಡೆದಿದ್ದೇನು?

Justiceforvishwas : ಶಿವಮೊಗ್ಗದ ಪೇಸ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ವಿಶ್ವಾಸ್ ರೈಲುಗಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ. ವಿಶ್ವಾಸ್ ಆತ್ಮಹತ್ಯೆ ಪ್ರಕರಣ ಪೇಸ್ ಕಾಲೇಜಿನ ಕೆಲವು ಉಪನ್ಯಾಸಕರನ್ನು ಬೋಟ್ಟು ಮಾಡಿ ತೋರಿಸುತ್ತಿದೆ. ವಿಶ್ವಾಸ್ ಮೃತದೇಹ ವೆಟನರಿ ಕಾಲೇಜಿನ ಸನಿಹದ ರೈಲ್ವೆ ಹಳಿಯ ಮೇಲೆ ಪತ್ತೆಯಾದಾಗ ಅವನ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನ ಉಂಟಾಗಿತ್ತು. ಅಲ್ಲದೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು ಹಾಗಾಗಿ ಆತ ಮನನೊಂದು ಸಾವನ್ನಪ್ಪಿರಬಹುದು ಎಂದು ಕಥೆಯೊಂದು ಹೆಣೆದುಕೊಳ್ಳುತ್ತಿತ್ತು. 

ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲ್ಲ: ಕೆ.ಎಸ್​.ಈಶ್ವರಪ್ಪ

ಆದರೆ ಅದೊಂದು ಪ್ರಚೋದನಾತ್ಮಕವಾದ ಆತ್ಮಹತ್ಯೆ ಎಂಬುದನ್ನು ಅರಿಯಲಿಕ್ಕೆ ಬಹಳ ಸಮಯ ಬೇಕಾಗಲಿಲ್ಲ. ಮೃತ ವಿಶ್ವಾಸ್ ತಂದೆ ನನ್ನ ಮಗನ ಸಾವಿಗೆ ಪೇಸ್ ಕಾಲೇಜಿನ ಕೆಲವು ಉಪನ್ಯಾಸಕರು ನೀಡಿದ ಮಾನಸಿಕ ಹಿಂಸೆಯೇ ಕಾರಣ. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನ ಮಗ ತುಂಬಾ ಮಂಕಾಗಿದ್ದ, ಅವನಿಗೆ ಕಾಲೇಜಿನಲ್ಲಿ ಉಪನ್ಯಾಸಕರು ಅವಮಾನಗೊಳಿಸಿದ ಹಿನ್ನಲೆಯಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ರು.

ಶಿವಮೊಗ್ಗ- ತೀರ್ಥಹಳ್ಳಿ ವಿದ್ಯಾರ್ಥಿಗಳಿಗೆ ಸಿಕ್ಕಿತು ರಾಜ್ಯಮಟ್ಟದ ಪ್ರಶಸ್ತಿ

ಸದ್ಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಆ ಇಡೀ ಕುಟುಂಬವಿದೆ.  ಮಗನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ವಿಶ್ವಾಸ್ ಆತ್ಮಹತ್ಯೆಯನ್ನು ಕೇವಲ ಆತ್ಮಹತ್ಯೆ ಎಂದು ಕೇಸು ದಾಖಲಿಸಿ ಕೈತೊಳೆದುಕೊಂಡರೆ, ಇಡೀ ವಿದ್ಯಾರ್ಥಿ ಸಮೂಹಕ್ಕೆ ಅನ್ಯಾಯ ಎಸಗಿದಂತಾಗುವುದಿಲ್ಲವೇ ಎಂಬುದು ಪ್ರಶ್ನೆ! ಸಂತ್ರಸ್ತ ಕುಟುಂಬದ ಕಣ್ಣೀರಿನ ಜೊತೆ ವಿಶ್ವಾಸ್​ನ ಸ್ನೇಹಿತರು ತಮ್ಮ ಎಳೆವಯಸ್ಸಿನಲ್ಲಿಯೇ ಜಸ್ಟಿಸ್​ ಫಾರ್​ ವಿಶ್ವಾಸ್​ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ! 

ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಬಗ್ಗೆ ಕೊನೆಯ ಅಭಿಪ್ರಾಯ ತಿಳಿಸಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ಮೂಲಗಳ ಪ್ರಕಾರ, ವಿಶ್ವಾಸ್ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿಳನ್ನು ಚೈಲ್ಡ್ ಅಂತಾ ಕರೆದಿದ್ದ. ಅದಕ್ಕೆ ಬಾಯಿ ಮಾತಿನಲ್ಲಿ ಗಲಾಟೆಯಾಗಿತ್ತು. ಈ ವಿಚಾರ ತಿಳಿಯದ ಓರ್ವ ಉಪನ್ಯಾಸಕ, ಬೇರೆ ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿ ವಿಶ್ವಾಸ್​ನನ್ನು ಟಾರ್ಗೆಟ್ ಮಾಡಿದ್ಧಾರೆ ಎನ್ನಲಾಗಿದೆ.  ಈ ವಿಚಾರದಲ್ಲಿ ರಾದ್ದಾಂತ ಎಬ್ಬಿಸಿದ ಶಿಕ್ಷಕ ಉಗುರಿನಲ್ಲಿ ಹೋಗುವ ವಿಷಯಕ್ಕೆ ಕೊಡಲಿ ತೆಗೆದುಕೊಂಡ ಎಂಬಂತೆ ಆಡಿದ್ದಾರೆ. ಅಲ್ಲದೆ ವೈಯಕ್ತಿಕ ಖಾಸಗಿತನದ ಗೌಪ್ಯ ಮಾಹಿತಿಯನ್ನು ತಿಳಿಯಬಾರದು ಎಂದು ಗೊತ್ತಿದ್ದರು ಸಹ,  ವಿಶ್ವಾಸ್ ನ ಮೊಬೈಲ್ ನಲ್ಲಿದ್ದ ಇನ್ ಸ್ಟಾ ಗ್ರಾಂ ನಲ್ಲಿದ್ದ ಮಾಹಿತಿಯನ್ನು ಹುಡುಕಾಡಿದ್ದಾರೆ. ವೈಯಕ್ತಿಕವಾಗಿ ವಿಶ್ವಾಸ್​ನ ಮಾಹಿತಿಗಳನ್ನು ತಿಳಿದುಕೊಂಡು  ತಮ್ಮ ಮೊಬೈಲ್ ಗೆ ಡಾಟಾವನ್ನು ಡಂಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇನ್​ಸ್ಟಾಗ್ರಾಂನಲ್ಲಿನ ಕೆಲ ಮಾಹಿತಿಗಳ ವಿಚಾರವಾಗಿ ಉಪನ್ಯಾಸಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇನ್ನೂ ಕಾಲೇಜಿನಲ್ಲಿನ ವಿಚಾರವಾಗಿ ವಿಶ್ವಾಸ್​ನ ಪೋಷಕರನ್ನು ಕರೆಸಿ ಅವರ ಎದುರೇ ವಿಶ್ವಾಸ್​ನನ್ನ ಹೀನಾಯವಾಗಿ ನಡೆಸಿಕೊಂಡಿದ್ದರು ಎನ್ನಲಾಗಿದೆ. 

ಇದೇ ಕಾರಣಕ್ಕೆ ವಿಶ್ವಾಸ್ ಆತ್ಮಹತ್ಯೆಗೂ ಎರಡು ದಿನದ ಹಿಂದಿನಿಂದಲೂ ಖಿನ್ನನಾಗಿದ್ದ. ಕಾಲೇಜಿನಲ್ಲಿ ಕೆಲ ಉಪನ್ಯಾಸಕರ ವರ್ತನೆಯಿಂದ ಬೇಸೆತ್ತ ಆತ ಕೊನೆಗೆ ಇನ್ಸ್ಟಾಗ್ರಾಂನಲ್ಲಿಯೇ ಬೈ ಎಂದು ಹೇಳಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸದ್ಯ ವಿಶ್ವಾಸ್​ನ ಮೇಲೆ ವಿಶ್ವಾಸವಿಟ್ಟವರು ಹೋದ ಜೀವ ಬರುವುದಿಲ್ಲ, ಆದರೆ ನ್ಯಾಯ ಸಲ್ಲಲೇಬೇಕು ಎಂದು ಜಸ್ಟೀಸ್ ಫಾರ್ ವಿಶ್ವಾಸ್ (Justiceforvishwas)​ ಎಂದು ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಂಬಂಧ ಪಟ್ಟ ಅಧಿಕಾರ ವರ್ಗ ನ್ಯಾಯ ನಿಜಕ್ಕೂ ನೀಡುತ್ತಾ ಎಂಬುದೆ ಪ್ರಶ್ನೆ.. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com