Jail Search Shivamogga july 02 /ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ  ಪೊಲೀಸರಿಂದ ದಿಢೀರ್ ದಾಳಿ, ಪರಿಶೀಲನೆ

ajjimane ganesh

Jail Search Shivamogga ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ  ಪೊಲೀಸರಿಂದ ದಿಢೀರ್ ದಾಳಿ, ಪರಿಶೀಲನೆ

Shivamogga news /ಶಿವಮೊಗ್ಗ, ಜುಲೈ 2, 2025: ಇಂದು ಮುಂಜಾನೆ ಶಿವಮೊಗ್ಗ ಜಿಲ್ಲೆಯ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ರವರ ಸೂಚನೆ ಮೇರೆಗೆ ದಿಢೀರ್ ದಾಳಿ ನಡೆಸಲಾಗಿದೆ.

- Advertisement -

Jail Search Shivamogga july 02

Jail Search Shivamogga july 02

ದಾಳಿ ಸಂದರ್ಭದಲ್ಲಿ  ಕಾರಾಗೃಹದ ಆವರಣದೊಳಗೆ ಕೈದಿಗಳ ಕೋಣೆಗಳು, ಅಡುಗೆ ಮನೆ, ಆಸ್ಪತ್ರೆ ವಿಭಾಗ ಮತ್ತು ಇತರ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಲಾಗಿದೆ. ಕಾನೂನು ಬಾಹಿರವಾದ ಸಾಮಗ್ರಿಗಳು ಸೇರಿದಂತೆ , ಮೊಬೈಲ್ ಫೋನ್‌ಗಳು ಅಥವಾ ಯಾವುದೇ ನಿಷಿದ್ಧ ವಸ್ತುಗಳ ಬಳಕೆಯನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ದಾಳಿ ಸಂದರ್ಭದಲ್ಲಿ ಯಾವುದೆ ನಿಷೇಧಿತ ವಸ್ತುಗಳು ಕಂಡುಬಂದಿಲ್ಲ ಎನ್ನಲಾಗಿದೆ.  

Jail Search Shivamogga july 02

ASP-1 ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್.ಪಿ (ಡಿ.ಎ.ಆರ್) ದಿಲೀಪ್, ಡಿವೈಎಸ್.ಪಿ (ಶಿವಮೊಗ್ಗ-ಎ ಉಪ ವಿಭಾಗ) ಬಾಬು ಆಂಜನಪ್ಪ, ಹಾಗೂ ಡಿವೈಎಸ್.ಪಿ (ಶಿವಮೊಗ್ಗ-ಬಿ ಉಪ ವಿಭಾಗ) ಸಂಜೀವ್ ಕುಮಾರ್ ಟಿ ಸೇರಿದಂತೆ  2 ಪೊಲೀಸ್ ಇನ್ಸ್‌ಪೆಕ್ಟರ್‌ಗಳು (ಪಿ.ಐ), 4 ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ಗಳು (ಪಿಎಸ್‌ಐ) ಮತ್ತು 41 ಪೊಲೀಸ್ ಸಿಬ್ಬಂದಿ ಒಳಗೊಂಡು ಒಟ್ಟು 50 ಜನರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Jail Search Shivamogga july 02
Jail Search Shivamogga july 02
Jail Security Check
Jail Security Check

Jail Security Check

Jail Security Checkಇನ್ನಷ್ಟು ಸುದ್ದಿಗಳಿಗಾಗಿ malenadutoday.com  ಕ್ಲಿಕ್ ಮಾಡಿ.

Share This Article
Leave a Comment

Leave a Reply

Your email address will not be published. Required fields are marked *