ipl final match ಇಂದು ಸಂಜೆ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಫೈನಲ್ ಮ್ಯಾಚ್ ನಡೆಯಲಿದೆ. ಕಳೆದ 9 ವರ್ಷಗಳ ಬಳಿಕ ಆರ್ಸಿಬಿ ಫೈನಲ್ ತಲುಪಿದ್ದು, ಆರ್ಸಿಬಿ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದೆ. ಇದರ ನಡುವೆ ಆರ್ಸಿಬಿ ತನ್ನ ಚೊಚ್ಚಲ ಟ್ರೋಫಿಯನ್ನು ಗೆಲ್ಲಲಿ ಎಂದು ನಾಡಿನೆಲ್ಲಡೆ ಅಭಿಮಾನಿಗಳು ದೇವರುಗಳಿಗೆ ಹರಕೆ ಕಟ್ಟಿಕೊಳ್ಳುವುದು ಪೂಜೆ ಮಾಡಿಸುವುದು ಸೇರಿದಂತೆ ಇತರೆ ಕಾರ್ಯದಲ್ಲಿ ನಿರತರಾದ್ದಾರೆ. ಅದರಂತೆ ಇಂದು ಶಿವಮೊಗ್ಗದಲ್ಲಿಯೂ ಆರ್ಸಿಬಿ ಗೆಲ್ಲಲಿ ಎಂದು ವಿವಿಧೆಡೆ ಅಭಿಮಾನಿಗಳು ಪೂಜೆ ಮಾಡಿಸುವುದು ಸೇರಿದಂತೆ ವಿಭಿನ್ನರೀತಿಯಲ್ಲಿ ಆರ್ಸಿಬಿಗೆ ಶುಭ ಕೋರಿದ್ದಾರೆ.
ipl final match ಸ್ಟೈಲ್ ಡ್ಯಾನ್ಸ್ ಗ್ರೂಪ್ನಿಂದ ಆರ್ಸಿಬಿಗೆ ಶುಭ ಹಾರೈಕೆ
ಆರ್ಸಿಬಿಗೆ ಶುಭವಾಗಲಿ ಎಂದು ಇಂದು ಶಿವಮೊಗ್ಗದ ಸ್ಟೈಲ್ ಡ್ಯಾನ್ಸ್ ಗ್ರೂಪ್ನಿಂದ ಶುಭ ಹಾರೈಸಲಾಯಿತು. ಮಕ್ಕಳೆಲ್ಲರೂ ಸಹ ಆರ್ಸಿಬಿಯ ಟೀಶರ್ಟ್ ತೊಟ್ಟು ಗೆದ್ದು ಬಾ ಆರ್ಸಿಬಿ ಎಂದು ಘೋಷಣೆ ಕೂಗಿದರು. ಹಾಗೆಯೇ ಕನ್ನಡದ ಭಾವುಟ ಹಿಡಿದು ಹೆಜ್ಜೆ ಹಾಕಿ ಶುಭ ಕೋರಿದರು.

ipl final match ವಿರಾಟ್ ಕೊಹ್ಲಿ ಕಟೌಟ್ಗೆ ಹಾಲಿನ ಅಭಿಷೇಕ

ಶಿವಮೊಗ್ಗದ ಕುಂಬಾರಗುಂಡಿ ಯುವಕರ ತಂಡದಿಂದ ಆರ್ಸಿಬಿ ಗೆದ್ದು ಬರಲೆಂದು ಶುಭ ಹಾರೈಸಲಾಯಿತು.ಹಾಗೆಯೇ ವಿರಾಟ್ ಕೊಹ್ಲಿ ಹಾಗೂ ಪಟಿದಾರ್, ನಟ ದರ್ಶನ್, ಸುದೀಪ್ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಲಾಯಿತು. ಕಾಯಿಯಲ್ಲಿ ಕರ್ಪೂರ ಹಚ್ಚಿ ಪೂಜೆ ಮಾಡಿ ಶುಭ ಕೋರಿದರು.

ರಾಷ್ಟ್ರ ಭಕ್ತ ಭಳಗದಿಂದ ವಿಶೇಷ ಪೂಜೆ
ಆರ್ಸಿಬಿ ತಂಡ ಟ್ರೋಪಿ ಗೆಲ್ಲಲಿ ಎಂದು ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ರಾಷ್ಟ್ರಭಕ್ತಬಳಗದಿಂದ ಪೂಜೆ ಸಲ್ಲಿಸಲಾಯಿತು. ಈ ವೇಳೆ ಅಭಿಮಾನಿಗಳು ನಾವೆಲ್ಲಾ ಹೇಳೊದು ಒಂದೇ ಈ ಸಲ ಕಪ್ ನಮ್ದೆ ಎಂದು ಘೋಷಣೆ ಕೂಗಿ ಆರ್ಸಿಬಿಗೆ ಶುಭ ಕೋರಿದರು.
ಹೊಳೆಬೆನವಳ್ಳಿ ಯುವಕರ ಬಳಗದಿಂದ ರಕ್ತದಾನ ಶಿಬಿರ
ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಈ ದಿನ ನಡೆಯುವ ಐಪಿಎಲ್ ಫೈನಲ್ ನಲ್ಲಿ ಗೆಲುವನ್ನು ಸಾಧಿಸಲು ಹೊಳೆಬೆನವಳ್ಳಿ ಯುವಕರ ಬಳಗ ರವರ ವತಿಯಿಂದ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. RCB ತಂಡವು ಈ ಸಲ ಕಪ್ ನಮ್ಮದಾಗಿಸಿಕೊಳ್ಳಬೇಕು ಎಂಬ ಭರವಸೆಯಿಂದ ಯುವಕರೆಲ್ಲರೂ ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.

ಹೀಗೆ ರಾಜ್ಯದೆಲ್ಲೆಡೆ ಇಂದು ಆರ್ಸಿಬಿ ಫೈನಲ್ನಲ್ಲಿ ಗೆದ್ದುಬರಲೆಂದು ರಾಜ್ಯಾಧ್ಯಂತ ವಿಭಿನ್ನ ರೀತಿಯಲ್ಲಿ ಶುಭ ಕೋರಲಾಗುತ್ತಿದೆ. ಕೆಲವೊಂಡು ಹೋಟೆಲ್ಗಳಲ್ಲಿ ಇಂದು ಆರ್ಸಿಬಿ ಫೈನಲ್ ತಲುಪಿರುವ ಸಲುವಾಗಿ ಮೆನುಗಳಲ್ಲಿ ವಿವಿಧ ಆಫರ್ಗಳನ್ನು ಕೊಡಲಾಗುತ್ತಿದೆ. ಆರ್ಸಿಬಿಗೆ ಈ ರೀತಿಯ ಆಚರಣೆ ಹೊಸದೇನಲ್ಲ ಕಳೆದ 18 ವರ್ಷದಿಂದ ಪ್ರತಿ ಭಾರಿಯೂ ಸಹ ಈ ಸಲ ಕಫ್ ನಮ್ದೇ ಎಂಬ ಘೋಷವಾಕ್ಯದೊಂದಿಗೆ ಆರ್ಸಿಬಿ ಅಭಿಮಾನಿಗಳು ಈ ರೀತಿ ವಿಭಿನ್ನವಾಗಿ ಶುಭ ಕೋರುತ್ತಲೇ ಬಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಆರ್ಸಿಬಿ ಈ ಬಾರಿ ತನ್ನ ಚೊಚ್ಚಲ ಕಪ್ನ್ನು ಗೆದ್ದರೆ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ. ಒನ್ಸ್ ಅಗೈನ್ ನಮ್ಮ ಮಲೆನಾಡು ಟುಡೆ ಬಳಗದಿಂದಲೂ ಸಹ ಆರ್ಸಿಬಿ ಗೆದ್ದು ಬರಲೆಂದು ಶುಭ ಹಾರೈಕೆಗಳನ್ನು ಕೋರುತ್ತಿದ್ದು, 18 ವರ್ಷದಿಂದ ಕಪ್ ಗೆಲ್ಲಲಿಲ್ಲ ಎಂಬ ಕೊಟ್ಯಾಂತರ ಅಭಿಮಾನಿಗಳ ಕೊರಗನ್ನು ಆರ್ಸಿಬಿ ಈ ಬಾರಿ ನಿವಾರಿಸುವಂತಾಗಲಿ. ಜೈ ಆರ್ಸಿಬಿ, ಈ ಸಲ ಕಪ್ ನಮ್ದೆ.