car bike accident ಉತ್ತರ ಪ್ರದೇಶದ ಗೋರಖ್‌ಪುರ-ವಾರಣಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರುಗಳ ನಡುವೆ ಭೀಕರ ಅಪಘಾತ ಸಂಬವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಈ ಅಪಘಾತದ ಭೀಕರ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರದ್ಯುಮ್ನ ಕುಮಾರ್ (22) ಅರವಿಂದ್ ಕುಮಾರ್ (23) ಸುನಿಲ್ ಕುಮಾರ್ (22), ಮತ್ತು ರಾಹುಲ್ ಕುಮಾರ್ (22) ಮೃತ ದುರ್ದೈವಿಗಳು.
car bike accident ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ವಿಡಿಯೋದಲ್ಲಿರುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ವರು ಸ್ನೇಹಿತರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು. ಆಗ ತಮ್ಮ ಎದುರಿನಲ್ಲಿ ಹೋಗುತ್ತಿದ್ದ ಟ್ರ್ಯಾಕ್ಟರ್ ಅನ್ನು ಓವರ್ಟೇಕ್ ಮಾಡುವ ಭರದಲ್ಲಿ ಸ್ಪೀಡಾಗಿ ಬೈಕ್ನ್ನು ಚಲಾಯಿಸಿದ್ದಾರೆ. ಆ ವೇಳೆ ಎದುರಿನಿಂದ ಬರುತ್ತಿದ್ದ ಎಸ್‌ಯುವಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್ ನಲ್ಲಿದ್ದ ಮೂವರು ಗಾಳಿಯಲ್ಲಿ ಹಾರಿ ಹೋಗಿ ರಸ್ತೆಗೆ ಬಿದ್ದಿದ್ದಾರೆ. ಅದರಲ್ಲಿ ಒಬ್ಬ ಕಾರ್ನ ಬಾನೆಟ್ಗೆ ಸಿಕ್ಕಿದ್ದು ಆತನನ್ನು ಕಾರು ಸುಮಾರು ನೂರು ಮೀಟರ್ ದೂರ ಎಳೆದುಕೊಂಡು ಹೋಗಿದೆ. ಕೂಡಲೇ ನಾಲ್ವರನ್ನು ಆಸ್ಪತ್ರೆಗೆ ಸೇರಿಸಿದ್ದರೂ ಸಹ ಅದಾಗಲೇ ನಾಲ್ವರು ಮೃತಪಟ್ಟಿದ್ದರೆಂದು ತಿಳಿದುಬಂದಿದೆ.

https://x.com/SriVallabh5453/status/1929259838476779751?t=shkiS4M0nqQzV4REQ9HNxw&s=19