Instagram reels ಶಿವಮೊಗ್ಗದಲ್ಲಿ ಲಾಂಗ್​ ಹಿಡಿದು ರೀಲ್ಸ್​ ಮಾಡಿದ ಯುವಕರ ವಿರುದ್ದ ಸುಮೋಟೋ ಕೇಸ್

prathapa thirthahalli
Prathapa thirthahalli - content producer

Instagram reels : ಈ ಹಿಂದೆ ಬಿಗ್​ ಬಾಸ್​ ಖ್ಯಾತಿಯ ರಜತ್​ ಹಾಗೂ ವಿನಯ್​  ಲಾಂಗ್​ ಹಿಡಿದು ವಿಡಿಯೋ ಮಾಡಿ ಪೇಚಿಗೆ ಸಿಲುಕಿ ಜೈಲಿಗೆ ಹೋಗಿ ಬಂದಿದ್ದರು. ನಂತರ ಆ ಕುರಿತಾಗಿ ಸಾರ್ವಜನಿಕವಾಗಿ ಕ್ಷಮೆಯನ್ನೂ ಸಹ ಕೇಳಿದ್ದರು. ಇದರ ನಡುವೆ ಇದೀಗ ಶಿವಮೊಗ್ಗದಲ್ಲಿ ಕೆಲ ಯುವಕರು ಲಾಂಗ್​ ಹಿಡಿದು ವಿಡಿಯೋ ಮಾಡಿ  ಇನ್‌ಸ್ಟಾಗ್ರಾಮ್ ನಲ್ಲಿ ಅಪ್ಲೋಡ್​ ಮಾಡಿದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ. ಈ ವಿಡಿಯೋ ಮಾಡಿದ ಅರೋಪಿಗಳ ವಿರುದ್ದ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಸುಮೊಟೋ ಕೇಸ್​ ದಾಖಲಿಸಿಕೊಂಡಿದ್ದಾರೆ. 

Instagram reels : ಎಫ್ಐಆರ್​ ನಲ್ಲಿ ಏನಿದೆ

ಏಪ್ರಿಲ್​ 22 ಪೊಲೀಸರು ಇನ್‌ಸ್ಟಾಗ್ರಾಮ್ ಪರಿಶೀಲಿಸುತ್ತಿದ್ದಾಗ ಯುವಕನೊಬ್ಬ ಆತನ ಇನ್ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಲಾಂಗ್​ ಹಿಡಿದುಕೊಂಡಿರುವ ವಿಡಿಯೋ ಒಂದನ್ನ ಅಪ್ಲೋಡ್​ ಮಾಡಿದ್ದರು. ಆ ವಿಡಿಯೋದಲ್ಲಿ  5 ರಿಂದ 6 ಜನ ಹುಡುಗರು ಲಾಂಗ್​ ಹಿಡಿದು ಮಾರುತಿ ಒಮಿನಿ ಕಾರಿನಿಂದ ಇಳಿದು ಇತರರಿಗೆ ಬೆದರಿಕೆ ಹಾಕುವಂತಹ ಮಾದರಿಯ ದೃಷ್ಯಗಳಿದ್ದವು.  20 ಸೆಕೆಂಡ್​ನ ಈ ರೀಲ್ಸ್​ ಪೋಸ್ಟ್​ನ್ನು ಆಧರಿಸಿ ಪೊಲೀಸರು ಸುಮೋಟೋ ಕೇಸ್​ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಓರ್ವ ಆರೋಪಿಯನ್ನು ಅರೆಸ್ಟ್​ ಕೂಡ ಮಾಡಿದ್ದಾರೆ. 

 

Share This Article