indian army : ಪಾಕ್​ ಮೇಲೆ ಮಿಸೈಲ್​ಗಳ ಮೆರವಣಿಗೆ : ಇಂಡಿಯನ್ ಆರ್ಮಿ ಹೇಳಿದ್ದೇನು?

prathapa thirthahalli
Prathapa thirthahalli - content producer

indian army :  ಕಳೆದ ತಡರಾತ್ರಿ ಬಾರತೀಯ ಸೇನೆ ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದೆ. ಈ ಹಿಂದೆ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, ಅದರ ಪ್ರತಿಕಾರವಾಗಿ ಪಾಕಿಸ್ತಾನದ ವಿರುದ್ದ  ವಾಯು, ಭೂ ಹಾಗೂ ನೌಕಾ ಸೇನೆ ಜಂಟಿಯಾಗಿ ದಾಳಿ ನಡೆಸಿದೆ.  ಈ ಕುರಿತು ರಕ್ಷಣಾ ಸಚಿವಾಲಯ ಸುದ್ದಿಗೋಷ್ಠಿ ನಡೆಸಿ ದಾಳಿ ಹೇಗೆ ನಡೆಯಿತು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದೆ.

operation sindoor : ಸಾಕ್ಷಿ ಸಮೇತ ಮಾಹಿತಿ ನೀಡಿದ ಸೇನಾಧಿಕಾರಿಗಳು 

ಕರ್ನಲ್​ ಸೋಫಿಯಾ ಖುರೇಶಿ  ವಿಂಗ್​ ಕಮ್ಯಾಂಡರ್​ ವ್ಯೋಮಿಕಾ  ಸಿಂಗ್ ಸಾಕ್ಷಿ ಸಮೇತ  ಮಾಹಿತಿ ನೀಡಿದ್ದು. ಪಾಕಿಸ್ತಾನದ 4 ಉಗ್ರ ನೆಲೆಗಳು ಹಾಗೂ ಪಿಓಕೆಯ 5 ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ. ಈ ದಾಳಿಯಲ್ಲಿ 80ಕ್ಕಿಂತ ಹೆಚ್ಚು ಜನ ಉಗ್ರರು ಸಾವನ್ನಪ್ಪಿದ್ದು ಮಧ್ಯ ರಾತ್ರಿ 1:05 ರಿಂದ 1:30 ರ ವರೆಗೆ 25 ನಿಮಿಷಗಳ ಕಾಲ ದಾಳಿ ನಡೆದಿದೆ.  ಗುಪ್ತಚರ ಇಲಾಖೆಯ  ಖಚಿತ ಮಾಹಿತಿ ಮೇರೆಗೆ  ಉಗ್ರರ ಕ್ಯಾಂಪ್​​ನ್ನು ಮಾತ್ರ ಟಾರ್ಗೆಟ್​ ಮಾಡಿ ದಾಳಿ ನಡೆಸಿದ್ದು, ಯಾವುದೇ ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿಲ್ಲ. ಪಾಕ್​ನ ದಾಳಿಯನ್ನು ಎದುರಿಸಲು ಭಾರತ ಸಿದ್ದ ಎಂದಿದ್ದಾರೆ,

- Advertisement -
indian army
indian army press meet
Share This Article
Leave a Comment

Leave a Reply

Your email address will not be published. Required fields are marked *