ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಗುಪ್ತದಳದ ಮಾಹಿತಿ ಆಧರಿಸಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ರೇಡ್ ನಡೆಸಿದ್ದು ಅಕ್ರಮವಾಗಿ ಸಾಗಿಸ್ತಿದ್ದ ಮರಳನ್ನ ಸೀಜ್ ಮಾಡಿದ್ದಾರೆ. ಸಾಗರ ತಾಲ್ಲೂಕು ಆನಂದಪುರದ ಬಳಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಐಜಿ ಸ್ಕ್ವಾಡ್ ನ ಗುಪ್ತದಳದಿಂದ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರೇಡ್ ಮಾಡಿದ್ದಾರೆ.
ಇಲ್ಲಿನ ಬಸವನಹೊಂಡ ಗ್ರಾಮದ ಬಳಿ ಕೆಂಜಿಗಾಪುರ ಕ್ರಾಸ್ ಬಳಿ ಹೊಸನಗರ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಇದೇ ವೇಳೆ ಗುಪ್ತದಳದ ಮಾಹಿತಿಯಂತೆ ಅಲ್ಲಿಗೆ ಬಂದ ಲಾರಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಲಾರಿಯಲ್ಲಿದ್ದ ಚಾಲಕ ಲಾರಿಯನ್ನ ಸೈಡ್ಗೆ ಹಾಕಿ, ಕೆಳಕ್ಕೆ ಇಳಿದು ಎಸ್ಕೇಪ್ ಆಗಿದ್ದಾನೆ. ಬಳಿಕ ಪೊಲೀಸರು ಲಾರಿಯನ್ನು ಸೀಜ್ ಮಾಡಿ ಕೇಸ್ ದಾಖಲಿಸಿದ್ದಾರೆ.,

ig squad Near Anandapura: Tipper Lorry Seized, Driver Absconding
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ig squad,ಅಕ್ರಮ ಮರಳು ಸಾಗಾಟ, ಟಿಪ್ಪರ್ ಲಾರಿ ಜಪ್ತಿ, ಆನಂದಪುರ ಪೊಲೀಸ್, ಹೊಸನಗರ ರಸ್ತೆ, ಮರಳು ಕಳ್ಳತನ, ಚಾಲಕ ಪರಾರಿ, ಕಾನೂನು ಕ್ರಮ, Illegal Sand Transport, Tipper Lorry Seized, Anandapura Police, Hosanagara Road, Sand Theft, Driver Absconding.
