SHIVAMOGGA NEWS / Malenadu today/ Nov 27, 2023 | Malenadutoday.com
CHIKKAMAGALURU | ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುತ್ತದ ಜಾತ್ರೆ ಎಂಬ ಜಾತ್ರೆ ನಡೆಯುತ್ತದೆ. ಈ ಜಾತ್ರೆ ಮಲೆನಾಡಿನಲ್ಲಿಯೇ ವಿಶೇಷವಾಗಿರುತ್ತದೆ.
ಮೂಡಿಗೆರೆ ತಾಲ್ಲೂಕು
ಇಲ್ಲಿನ ಮೂಡಿಗೆರೆ ತಾಲ್ಲೂಕಿನ ಬಗ್ಗಸಗೋಡು-ಬಾನಳ್ಳಿ ಗ್ರಾಮದಲ್ಲಿ ನಡೆಯುವ ಉಣ್ಣಕ್ಕಿ ಜಾತ್ರೆಗೇನೆ ಹುತ್ತದ ಜಾತ್ರೆ ಅಂತಾ ಕರೆಯಲಾಗುತ್ತದೆ. ವಿಶೇಷ ಅಂದರೆ, ಇಲ್ಲಿಉರವ ಉಣ್ಣಕ್ಕಿ ಹುತ್ತ ಜಾತ್ರೆ ಸಂದರ್ಭದಲ್ಲಿ ಪೂಜೆಯ ವೇಳೆಯಲ್ಲಿ ಹುತ್ತ ಅಲುಗಾಡುತ್ತದೆ.
READ : ಹೊಸನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!
ಅಲುಗಾಡುವ ಹುತ್ತ
ಸಹಸ್ರಾರು ಭಕ್ತರು ಅಲುಗಾಡುವ ಹುತ್ತದ ದೃಶ್ಯವನ್ನು ನೋಡಿ ಕೈಮುಗಿಯುತ್ತಾರೆ. ಮೂರು ಶತಮಾನಗಳ ಹಿಂದೆ ತಲೆಯೆತ್ತಿರುವ ಹುತ್ತ ಇದಾಗಿದೆ ಎಂದು ನಂಬಲಾಗಿದ್ದು, ಜಾತ್ರೆಯ ವೇಳೆಯಲ್ಲಿ ಮಹಾ ಮಂಗಳಾರತಿ ಆಗುತ್ತಿದ್ದಂತೆ ಹುತ್ತವು ಕೆಲ ಸೆಕೆಂಡ್ಗಳ ನಡುಗುತ್ತದೆ.
ಈ ವೇಳೆ ಹುತ್ತಕ್ಕೆ ಮಂಡಕ್ಕಿ ಎರಚಿ ಭಕ್ತರು ಹರಕೆ ತೀರಿಸುತ್ತಾರೆ. ಅಲ್ಲದೆ ಈ ಹುತ್ತದ ಮಣ್ಣು ಹಲವು ಕಾಯಿಲೆಗಳಿಗೆ ರಾಮಬಾಣ ಅನ್ನುವ ನಂಬಿಕೆ ಇಲ್ಲಿದೆ
