hulikal ghat : ಸವಾರರೇ ಹುಲಿಕಲ್ ಘಾಟಿಯಲ್ಲಿ ಹೋಗುವಾಗ ಎಚ್ಚರ | ಯಾಕೆ ಗೊತ್ತಾ..
hulikal ghat : ಸತತ ಒಂದು ವಾರದಿಂದ ಸುರಿಯುತ್ತ್ತಿರುವ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಮಾರ್ಗದಲ್ಲಿ ಭಾರೀ ಮಣ್ಣು ಕುಸಿತ ಸಂಭವಿಸಿದೆ.
ಚಂಡಿಕಾಂಬ ದೇವಸ್ಥಾನದ ಬಳಿಯ ಹೇರ್ ಪಿನ್ ತಿರುವಿನಲ್ಲಿ ರಸ್ತೆಯ ಕೆಳಭಾಗದ ಮಣ್ಣು ಕುಸಿದು, ಕಾಂಕ್ರೀಟ್ ರಸ್ತೆಯ ಕೆಳಗೆ ಮೂರು ಅಡಿ ಆಳದ ಕೊರೆತ ಕಂಡುಬಂದಿದೆ. ರಸ್ತೆಯ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಹಿಂದೆ ನಿರ್ಮಿಸಿದ ತಡೆಗೋಡೆಗೆ ಹಾನಿಯಾಗಿದ್ದು, ಇದು ಮಣ್ಣು ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹುಲಿಕಲ್ ಘಾಟ್ ಮಾರ್ಗವು ಕರಾವಳಿ ಮತ್ತು ಮಧ್ಯ ಕರ್ನಾಟಕದ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಮತ್ತು ಇತರ ಅಗತ್ಯ ಸರಕುಗಳ ಸಾಗಣೆಗೆ ಹೆಚ್ಚಾಗಿ ಈ ಮಾರ್ಗವನ್ನು ಅವಲಂಬಿಸಲಾಗಿದೆ. ಆಗುಂಬೆ ಘಾಟ್ ಲಘು ವಾಹನಗಳಿಗೆ ಮಾತ್ರ ಸೀಮಿತವಾಗಿರುವುದರಿಂದ, ಹುಲಿಕಲ್ ಮಾರ್ಗದ ಮೇಲೆ ಹೆಚ್ಚಿನ ಸರಕು ವಾಹನಗಳು ಚಲಿಸುತ್ತವೆ. ಇದರ ನಡುವೆ ಮಣ್ಣು ಕುಸಿತವಾಗಿದ್ದು, ಈ ಸಂಚಾರ ಮಾರ್ಗದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ.

