kamal haasan : ಕಮಲ್ ಹಾಸನ್ ಚಿತ್ರ ಬ್ಯಾನ್ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ | ಬೇಳೂರು ಗೋಪಾಲ ಕೃಷ್ಣ
ಕಮಲ್ ಹಾಸನ್ ಕನ್ನಡ ಬಗ್ಗೆ ಮಾತನಾಡಿ ಕ್ಷಮೆ ಕೇಳದೆ ದರ್ಪತೋರಿದ್ದಾರೆ. ಅವರ ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಸಾಗರ ಶಾಸಕ ಬೇಳೂರು ಗೋಪಾಲ ಕಷ್ಣ ಹೇಳಿದ್ದಾರೆ.
kamal haasan : ಶನಿವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿಕೆಯನ್ನು ನೀಡಿ ತಪ್ಪು ಮಾಡಿದ್ದಾರೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇಷ್ಟೆಲ್ಲಾ ವಿವಾದದ ನಂತರ ಅವರು ಆ ರೀತಿ ಹೇಳಿಕೆಗೆ ಕ್ಷಮೆ ಕೇಳಬಹುದಿತ್ತು. ಆದರೆ ಕ್ಷಮೆ ಕೇಳದೆ ದರ್ಪ ತೋರಿದ್ದಾರೆ. ಆದ್ದರಿಂದ ಅವರ ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ಅವಕಾಶ ಕೊಡಬಾರದೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಈ ಕುರಿತು ಕನ್ನಡ ಸಂಘಗಳು ಹೋರಾಟವನ್ನು ಮಾಡುತ್ತಿದ್ದಾರೆ. ಹೋರಾಟಗಾರರು ನ್ಯಾಯಯುತವಾಗಿ ಹೋರಾಟ ಮಾಡಲಿ, ಆದರೆ ಥೀಯೇಟರ್ಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡಬಾರದು ಎಂದ ಅವರು, ಈ ಕುರಿತಾಗಿ ಜನರು ಶಿವರಾಜ್ ಕುಮಾರ್ ಬಗ್ಗೆ ಮಾತನಾಡುವುದನ್ನು ನಾನು ಒಪ್ಪಲ್ಲ, ಶಿವರಾಜ್ ಕುಮಾರ್ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ ಎಂದರು.
