hosanagara news today ಜೂನ್​ 27: ಹೊಸನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರಿಗೆ ಗಾಯ

hosanagara news today : ಹೊಸನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರಿಗೆ ಗಾಯ

ಹೊಸನಗರ: ಹೊಸನಗರ ಪಟ್ಟಣದ ಹೊರವಲಯದ ಜಯನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ.

 ಮಾವಿನಕೊಪ್ಪ ನಿವಾಸಿ ಸೈಕಲ್ ಶಾಪ್ ಶ್ರೀನಿವಾಸ್ ಅವರ ಕುಟುಂಬ ಕುಂದಾಪುರದ ದೇವಸ್ಥಾನವೊಂದಕ್ಕೆ ಕಾರಿನಲ್ಲಿ ತೆರಳುತ್ತಿತ್ತು. ಹೊಸನಗರ-ರಾಣೆಬೆನ್ನೂರು-ಬೈಂದೂರು 766ಸಿ ರಾಜ್ಯ ಹೆದ್ದಾರಿಯ ಹೊಸನಗರ ಪಟ್ಟಣದ ಹೊರವಲಯದ ಜಯನಗರ ಬಳಿಯ ಸುತ್ತು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಟಿಪ್ಪರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶ್ರೀನಿವಾಸ್ ಅವರ ಪತ್ನಿ ರೇವತಿ ಹಾಗೂ ಪುತ್ರ ಸುಶಾಂತ್ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

hosanagara news today ಟಿಪ್ಪರ್​ಗೆ ಡಿಕ್ಕಿ ಹೊಡೆದ ಕಾರು
hosanagara news today ಟಿಪ್ಪರ್​ಗೆ ಡಿಕ್ಕಿ ಹೊಡೆದ ಕಾರು

 

1 thought on “hosanagara news today ಜೂನ್​ 27: ಹೊಸನಗರ ಬಳಿ ಟಿಪ್ಪರ್‌ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರಿಗೆ ಗಾಯ”

Leave a Comment