Hosanagara heart attack : ಹೃದಯಾಘಾತದಿಂದ ಹೊಸನಗರದ ಯುವಕ ಬಲಿ
ಹೊಸನಗರ: ರಾಜ್ಯಾದ್ಯಂತ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಹೊಸನಗರದ ಯುವಕನೊಬ್ಬ ಬಲಿಯಾಗಿದ್ದಾನೆ. ನಗರ ವ್ಯಾಪ್ತಿಯ ಹಿರೀಮನೆ ಗ್ರಾಮದ ನಿವಾಸಿ, 34 ವರ್ಷದ ಗಿರೀಶ್ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಗಿರೀಶ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು, ಆದರೆ ದಾರಿಯಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಕೇವಲ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಗಿರೀಶ್ ಅವರಿಗೆ ಒಂದು ತಿಂಗಳ ಹಿಂದಷ್ಟೇ ಮಗುವಾಗಿತ್ತು. ಯುವ ವಯಸ್ಸಿನಲ್ಲೇ ಅವರ ಅಕಾಲಿಕ ಮರಣ ಕುಟುಂಬದವರನ್ನು ಆಘಾತಕ್ಕೀಡು ಮಾಡಿದೆ.