ಹೊನ್ನಾಳಿ ರಸ್ತೆ, ಹೊಳೆಹೊನ್ನೂರು ರಸ್ತೆ, ಬಸ್​ ನಿಲ್ದಾಣ | ಶಿವಮೊಗ್ಗದಲ್ಲಿ ಎರಡು ದಿನ ಪವರ್ ಕಟ್! ಎಲ್ಲೆಲ್ಲಿ? ವಿವರ ಇಲ್ಲಿದೆ?

Honnali Road, Holehonnur Road, Bus Stand | Power cut for two days in Shimoga Where? Here's the details?

ಹೊನ್ನಾಳಿ ರಸ್ತೆ, ಹೊಳೆಹೊನ್ನೂರು ರಸ್ತೆ, ಬಸ್​ ನಿಲ್ದಾಣ | ಶಿವಮೊಗ್ಗದಲ್ಲಿ ಎರಡು ದಿನ ಪವರ್ ಕಟ್! ಎಲ್ಲೆಲ್ಲಿ? ವಿವರ  ಇಲ್ಲಿದೆ?

SHIVAMOGGA  | POWER CUT |   Dec 5, 2023 | ಶಿವಮೊಗ್ಗದ ವಿವಿಧ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಶಿವಮೊಗ್ಗ ವಿಭಾಗ ತಿಳಿಸಿದೆ

ಮೆಸ್ಕಾಂ ಪ್ರಕಟಣೆ 

ಶಿವಮೊಗ್ಗ ಎಂ.ಆರ್.ಎಸ್ 110/11 ಕೆವಿ ವಿವಿ ಕೇಂದ್ರದ ಎಫ್-7 ಪಿಳ್ಳಂಗಿರಿ ಎನ್.ಜೆ.ವೈ ಮತ್ತು ಎಫ್-8 ಜಾವಳ್ಳಿ ಐ ಪಿ ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.05 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ : ಇಂದು ಮತ್ತು ನಾಳೆ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ POWER CUT

ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರ ಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

READ : ಆಟವಾಡ್ತಿದ್ದ ಬಾಲಕನ ಮೇಲೆ ಬಿದ್ದ ಕಬ್ಬಿಣದ ಗೇಟ್! ಭದ್ರಾವತಿ ಮಿಲ್ಟ್ರಿ ಕ್ಯಾಂಪ್​ನಲ್ಲಿ ಘಟನೆ

ಶಿವಮೊಗ್ಗ ನಗರ

ಡಿ.5ರಂದು ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಎಂ. ಎಫ್-12ರ ವ್ಯಾಪ್ತಿಯ ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಕಿನಿ ಲೇಔಟ್, ಮಿಳಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ

ತ್ಯಾವರೆಚಟ್ನಹಳ್ಳಿ

ಡಿ.6ರಂದು ಶಾಂತಿನಗರದ ವಿದ್ಯುತ್ ಮಾರ್ಗ ನಿರ್ವಹಣಾ ಕಾಮಗಾರಿ ಪ್ರಯುಕ್ತ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶಾಂತಿನಗರ, ಹೊನ್ನಾಳಿ ರಸ್ತೆ, ತ್ಯಾವರೆಚಟ್ನಹಳ್ಳಿ, ಶೃತಿ ಮೋಟಾರ್ಸ್‌, ಚೌಡೇಶ್ವರಿ ಕಾಲೋನಿ, ಪಾಪ್ಯುಲರ್‌ರೈಸ್ ಮಿಲ್, ಸೇವಾಲಾಲ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಎಂಜಿನಿಯ‌ರ್ ತಿಳಿಸಿದ್ದಾರೆ.