ಆಟವಾಡ್ತಿದ್ದ ಬಾಲಕನ ಮೇಲೆ ಬಿದ್ದ ಕಬ್ಬಿಣದ ಗೇಟ್! ಭದ್ರಾವತಿ ಮಿಲ್ಟ್ರಿ ಕ್ಯಾಂಪ್​ನಲ್ಲಿ ಘಟನೆ

Malenadu Today

SHIVAMOGGA  | BHADRAVATI |   Dec 4, 2023 | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಮಿಲ್ಟ್ರಿಕ್ಯಾಂಪ್ ಬಳಿಯಲ್ಲಿ ಕಬ್ಬಿಣದ ಗೇಟ್ ಬಿದ್ದು ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಸಂಭವಿಸಿದೆ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು

ಆಟವಾಡುತ್ತಿದ್ದ ಬಾಲಕನ ಮೇಲೆ ಬೃಹತ್ ಗಾತ್ರದ ಕಬ್ಬಿಣದ ಗೇಟ್ ಮುರಿದು ಬಿದ್ದಿರುವ ಘಟನೆ ನಗರದ ಮಿಲ್ಟಿಕ್ಯಾಂಪ್ ಪೊಲೀಸ್‌ ವಸತಿ ಗೃಹದ ಮುಖ್ಯದ್ವಾರದ ಬಳಿ ನಡೆದಿದೆ. 

READ : ತೀರ್ಥಹಳ್ಳಿಯ ಕುಶಾವತಿ ಸೇತುವೆ ಬಳಿಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ

ಇಲ್ಲಿನ  ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರೂಪೇಶ್ ಅವರ 8 ವರ್ಷದ ಬಾಲಕ ಗಾಯಗೊಂಡಿದ್ದಾನೆ. ತಕ್ಷಣ ಅವರನ್ನು ಹಳೇ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ  ಆಸ್ಪತ್ರೆಗೆ ರವಾನಿಸಲಾಗಿದೆ.ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. 

ದುರ್ಘಟನೆಗೆ ಕಳಪೆ ಗುಣಮಟ್ಟದ ಕಬ್ಬಿಣದ ಗೇಟ್ ಅಳವಡಿಸಿರುವುದೇ ಕಾರಣ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪರಿಶೀಲನೆಗೆ ಒತ್ತಾಯ ಕೇಳಿಬರುತ್ತಿದೆ. 

 

Share This Article