ಶಿವಮೊಗ್ಗ : ಕುಡಿಯುವುದು ಒಳ್ಳೆಯದಲ್ಲ ಕುಡಿತದ ಚಟ ಬಿಡು ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ಕ್ತಿಯೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಹರಕೆರೆಯಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ಬೆಳ್ಳಿ 3 ಲಕ್ಷ! ಬಂಗಾರ 1.5 ಲಕ್ಷ! ಬಾನಿಗೇರಿದ ಬೆಲೆ, ಬಸವಳಿದ ಗ್ರಾಹಕ!
ಮಲ್ಲಿಕಾರ್ಜುನ (35) ಮೃತಪಟ್ಟ ದುರ್ದೈವಿ. ಈತನು ಪ್ರತಿದಿನ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದ್ದು, ಮಗನ ಆರೋಗ್ಯದ ದೃಷ್ಟಿಯಿಂದ ಆತನ ತಂದೆ-ತಾಯಿ ಕುಡಿಯುವುದು ಒಳ್ಳೆಯದಲ್ಲ, ಈ ಚಟದಿಂದ ದೂರವಿರು ಎಂದು ಬುದ್ದಿವಾದ ಹೇಳಿದ್ದರು.ಆದರೆ, ಪೋಷಕರ ಈ ಮಾತುಗಳಿಂದ ಮನನೊಂದ ಮಲ್ಲಿಕಾರ್ಜುನ ಅಡಿಕೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Holehonnuru Man Ends Life Over Alcohol



