holehonnur theft case 15-06-2025/ ಹೊಳೆಹೊನ್ನೂರು ಹೋಟೆಲ್​ನಲ್ಲಿ ಕನ್ನ ಪ್ರಕರಣ/ ಹೊಸನಗರದ ಆರೋಪಿ ಅರೆಸ್ಟ್ ! ಏನಿದು ಕೇಸ್​

Malenadu Today

holehonnur theft ಹೊಳೆಹೊನ್ನೂರು ಹೋಟೆಲ್ ಕಳ್ಳತನ ಪ್ರಕರಣ: ಓರ್ವನ ಬಂಧನ, ₹6.40 ಲಕ್ಷ ಮೌಲ್ಯದ ವಸ್ತುಗಳು ವಶ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಎಮ್ಮೆಹಟ್ಟಿ ಗ್ರಾಮದ ಹೋಟೆಲ್‌ನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹6.40 ಲಕ್ಷ ಮೌಲ್ಯದ ಬ್ಯಾಟರಿಗಳು, ಅಡುಗೆ ಪಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ವಿವರ: ದಿನಾಂಕ 04-04-2025 ರಂದು, ನಡೆದ ಘಟನೆ ಸಂಬಂಧ ಎಮ್ಮೆಹಟ್ಟಿ ಗ್ರಾಮದ ನಿವಾಸಿ ಶಿವಾಜಿರಾವ್ (36) ಎಂಬುವವರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಪ್ರಕಾರ, ಹೋಟೆಲ್‌ನ  ಬಾಗಿಲನ್ನು ಒಡೆದು, ಹೋಟೆಲ್‌ನಲ್ಲಿದ್ದ ಬ್ಯಾಟರಿಗಳು, ಅಡುಗೆ ಪಾತ್ರೆಗಳು ಮತ್ತು ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದರು. ಈ ಸಂಬಂಧ  ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ  ಕಲಂ 331(3), 331(4), 305 ಬಿ.ಎನ್.ಎಸ್. ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.  

holehonnur theft
holehonnur theft

ಪ್ರಕರಣ ಸಂಬಂಧ  ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್  ಲಕ್ಷ್ಮೀಪತಿ ಆರ್. ಎಲ್. ಅವರ ನೇತೃತ್ವದಲ್ಲಿ ಎಎಸ್‌ಐ ಉಮೇಶ್ ಹಾಗೂ ಸಿಬ್ಬಂದಿಗಳಾದ ಹೆಚ್‌ಸಿ ಅಣ್ಣಪ್ಪ, ಪ್ರಸನ್ನ, ಮಂಜುನಾಥ, ಪ್ರಕಾಶ್ ನಾಯ್ಕ ಮತ್ತು ಸಿಪಿಸಿ ವಿಶ್ವನಾಥ್ ಅವರನ್ನು ಒಳಗೊಂಡ ತಂಡ ತನಿಖೆ ನಡೆಸಿತ್ತು.

ಇದೀಗ  ನಿನ್ನೆಯಷ್ಟೇ (ಜೂನ್ 14, 2025) ಪ್ರಕರಣದ ಆರೋಪಿ ರಾಕೇಶ್ ಹೆಚ್. ಕೆ. (27 ವರ್ಷ, ಹೆಂಡೆಗದ್ದೆ ಮೂಡಗೊಪ್ಪ ಗ್ರಾಮ, ಹೊಸನಗರ ತಾಲ್ಲೂಕು) ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ದಸ್ತಗಿರಿ ಮಾಡಿದೆ. ಆರೋಪಿಯಿಂದ ಕಳ್ಳತನಕ್ಕೆ ಸಂಬಂಧಿಸಿದ 5 ಬ್ಯಾಟರಿಗಳು (ಅಂದಾಜು ಮೌಲ್ಯ ₹60,000), ಅಡುಗೆ ಪಾತ್ರೆಗಳು (ಅಂದಾಜು ಮೌಲ್ಯ ₹80,000) ಹಾಗೂ ಕೃತ್ಯಕ್ಕೆ ಬಳಸಿದ ವಾಹನ (ಅಂದಾಜು ಬೆಲೆ ₹5,00,000) ಸೇರಿದಂತೆ ಒಟ್ಟು ₹6,40,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

holehonnur theft

ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್‌ಗಳಿಗಾಗಿ: 

  • ಶಿವಮೊಗ್ಗ ಪೊಲೀಸ್ ಇಲಾಖೆ: Shivamogga Police
  • ಸ್ಥಳೀಯ ಸುದ್ದಿ ಮತ್ತು ಅಡಿಕೆ ದರಗಳಿಗಾಗಿ: Malenadutoday.com

Share This Article