High Court Ruling | ಶಿವಮೊಗ್ಗಕ್ಕೆ ಸಂಬಂಧಿಸಿದ ಕೋರ್ಟ್ ಕೇಸ್ವೊಂದರಲ್ಲಿ, ಅಪರಾಧಿಯೊಬ್ಬನಿಗೆ ಸ್ವಾಭಾವಿಕವಾಗಿ ಸಾವು ಸಂಭವಿಸುವವರೆಗೂ ಜೈಲು ಶಿಕ್ಷೆಯನ್ನು ನೀಡಿರುವುದನ್ನ ಆಕ್ಷೇಪಿಸಿರುವ ಕರ್ನಾಟಕ ಹೈಕೋರ್ಟ್ ಈ ರೀತಿ ಆಜೀವ ಶೀಕ್ಷೆ ವಿಧಿಸುವಂತಹ ವಿಶೇಷ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಾದ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಿಗೆ ಮಾತ್ರವೇ ಇದೆ ಎಂದು ತಿಳಿಸಿದೆ.
ಭದ್ರಾವತಿ | ಪಂಚಾಯಿತಿಯಲ್ಲಿ ನಡೀತು ಜಗಳ, ಮಹಿಳೆ ಸೇರಿ ಮೂವರು ಆರೋಪಿಗಳಿಗೆ ಕೋರ್ಟ್ ಕೊಟ್ಟ ಶಿಕ್ಷೆಯೇನು ಗೊತ್ತಾ,,?
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ಮಗುವೊಂದರ ಕೊಲೆ ಪ್ರಕರಣವೊಂದರ ವಿಚಾರಣೆಯಲ್ಲಿ ಹೈಕೋರ್ಟ್ ಈ ಮಾತು ಹೇಳಿದೆ. ನ್ಯಾಯಪೀಠ, ವಿಚಾರಣಾಧೀನ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಮಾರ್ಪಡಿಸುವ ಮೂಲಕ ಸ್ಪಷ್ಟನೆಯನ್ನು ಸಹ ನೀಡಿದೆ.

ಶಿವಮೊಗ್ಗ ಜಿಲ್ಲೆಯ ಮಠವೊಂದರಲ್ಲಿ 3.5 ವರ್ಷದ ಮಗುವನ್ನು ಕೊಲೆಗೈದಿದ್ದ ಆರೋಪದಡಿ ವ್ಯಕ್ತಿಯೊಬ್ಬನಿಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಸಾಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ 28 ವರ್ಷದ ಅಪರಾಧಿ ರುದ್ರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದ.
ಶಿವಮೊಗ್ಗ ಜಿಲ್ಲೆಯ…..ಗ್ರಾಮದ ನಿವಾಸಿ ರು.. ಎಂಬಾತ ತಾಲ್ಲೂಕು ಒಂದರಲ್ಲಿರುವ ಮಠವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಗೀಡಾದ ಮಗುವಿನ ತಾಯಿ ಮಠಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಮತ್ತು ಮಠದ ವ್ಯವಹಾರಗಳಲ್ಲಿ ಸಲಹೆ ನೀಡುತ್ತಿದ್ದರು. ಇದೇ ವಿಚಾರವಾಗಿ ಆರೋಪಿ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. 2017 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಗುವಿನ ತಾಯಿ ಮತ್ತು ಕುಟುಂಬದವರು ಭಾಗವಹಿಸಿ ಮಠದಲ್ಲಿಯೇ ರಾತ್ರಿ ಉಳಿದುಕೊಂಡಿದ್ದರು. ಬೆಳಿಗ್ಗೆ 5.30ಕ್ಕೆ ಎದ್ದಾಗ ಮಗು ಕಾಣೆಯಾಗಿತ್ತು, ನಂತರ ಮಗು ಶವವಾಗಿ ಪತ್ತೆಯಾಗಿತ್ತು. ಹೊಸನಗರ ಪೊಲೀಸರು ತನಿಖೆ ನಡೆಸಿ ಆರೋಪಿ ಮಗುವನ್ನು ಅಪಹರಿಸಿ ಕೊಲೆ ಮಾಡಿದ ವಿಚಾರವನ್ನು ಬಯಲಿಗೆಳೆದಿದ್ದರು. ಆನಂತರ ಈ ಪ್ರಕರಣದಲ್ಲಿ 2017ರ ನವೆಂಬರ್ 27 ರಂದು ವಿಚಾರಣಾ ನ್ಯಾಯಾಲಯ ಆರೋಪಿಯನ್ನ ದೋಷಿ ಎಂದು ಪರಿಗಣಿಸಿ ಆಜೀವಾವಧಿ ಶಿಕ್ಷೆ ವಿಧಿಸಿತ್ತು.

ಭದ್ರಾವತಿ ಕೇಸ್! ದಾವಣಗೆರೆ ಹರಿಹರದ ಪ್ರತಾಪ ಅರೆಸ್ಟ್!
ಈ ತೀರ್ಪಿನ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಸಾಯುವವರೆಗೂ ಜೈಲು ಎಂಬ ಶಿಕ್ಷೆಯನ್ನು ರದ್ದುಪಡಿಸಿ, ಅದನ್ನು ಸಾಮಾನ್ಯ ಜೀವಾವಧಿ ಶಿಕ್ಷೆ ಎಂದು ಮಾರ್ಪಡಿಸಿದೆ. ಸಾಯುವವರೆಗೂ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಸೆಷನ್ಸ್ ಕೋರ್ಟ್ಗೆ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಜೀವಾವಧಿ ಶಿಕ್ಷೆಯಾದಲ್ಲಿ ಅಪರಾಧಿ 14 ವರ್ಷಗಳ ಜೈಲು ಶಿಕ್ಷೆಯನ್ನು ಪೂರೈಸಿದ ನಂತರ, ಆತನ ಸನ್ನಡತೆಯನ್ನು ಆಧರಿಸಿ ಸರ್ಕಾರವು ಆತನನ್ನು ಬಿಡುಗಡೆ ಮಾಡುವ ಅಧಿಕಾರ ಮತ್ತು ಅವಕಾಶವನ್ನು ಹೊಂದಿರುತ್ತದೆ. ಆದರೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿದರೆ ಆ ಅವಕಾಶವಿರುವುದಿಲ್ಲ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
