guest faculty recruitment in karnataka ಸರ್ಕಾರಿ ಪ್ರೌಢಶಾಲೆಗಳಲ್ಲಿ 9,499 ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಗೆ ಅನುಮತಿ
ರಾಜ್ಯ ಸರ್ಕಾರ, ಶಿಕ್ಷಕರ ನೇಮಕಾತಿಗೂ ಮೊದಲು ಅತಿಥಿ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಒಟ್ಟು 11 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸೂಚನೆ ಸಿಕ್ಕಿದ್ದು ಈ ಸಂಬಂಧ 2025-26 ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಾಗಿರುವ 9,499 ವಿಷಯ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಅನುಮತಿ ನೀಡಿದೆ. ಈ ನೇಮಕಾತಿಗಳು ನೇರ ಭರ್ತಿ, ಬಡ್ತಿ ಅಥವಾ ವರ್ಗಾವಣೆ ಮೂಲಕ ಶಾಶ್ವತ ಹುದ್ದೆಗಳು ತುಂಬುವವರೆಗೆ ಅಥವಾ ಮಾರ್ಚ್ 2026ರ ವರ್ಷಾಂತ್ಯದವರೆಗೆ (ಇದರಲ್ಲಿ ಯಾವುದು ಮೊದಲು ಸಂಭವಿಸುತ್ತದೋ) ಮಾನ್ಯವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
guest faculty recruitment in karnataka
ಈ ನೇಮಕಾತಿಗಳು ಗೌರವಧನದ ಆಧಾರದ ಮೇಲೆ 1 ಜೂನ್ 2025ರಿಂದ ಜಾರಿಗೆ ಬರುತ್ತವೆ. ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪಬ್ಲಿಕ್ ಶಾಲೆಗಳು, ಬೆಂಗಳೂರು ಪಬ್ಲಿಕ್ ಶಾಲೆಗಳು ಮತ್ತು ಆದರ್ಶ ವಿದ್ಯಾಲಯಗಳಲ್ಲಿ ಖಾಲಿ ಇರುವ ಸಹಶಿಕ್ಷಕರ ಹುದ್ದೆಗಳ ಶೇಕಡಾ ನೂರರಷ್ಟು ಅತಿಥಿ ಶಿಕ್ಷಕರನ್ನು ಮೊದಲ ಆದ್ಯತೆ ನೀಡಿ ಆಯ್ಕೆ ಮಾಡುವುದು. ಅಲ್ಲದೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಮೂಲಕ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ.
