gst to upi: ಇತ್ತೀಚೆಗೆ 2000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿ Central Board of Direct Taxes (CBDT) ಇಂತಿಷ್ಟು ಜಿಎಸ್ಟಿ ವಿಧಿಸುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳು ಸುಳ್ಳು ಎಂದು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯ ಈ ಸುದ್ದಿ ಸುಳ್ಳು ಎಂದು PIB ಮೂಲಕ ಪ್ರಕಟಣೆ ನೀಡಿದೆ.
gst to upi : ಪ್ರಕಟಣೆಯಲ್ಲಿ ಏನಿದೆ
ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಪ್ರಕಟಣೆಯಲ್ಲಿ 2 ಸಾವಿರಕ್ಕಿಂತ ಕ್ಕಿಂತ ಹೆಚ್ಚಿನ ಹಣವನ್ನು ಗೂಗಲ್ ಪೇ ಫೋನ್ ಪೇ ಇನ್ನಿತರ ಯುಪಿಐ ಮೂಲಕ ಪಾವತಿಸಿದರೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿಗಳು ಸಂಪೂರ್ಣವಾಗಿ ಸುಳ್ಳು. ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದಿದೆ.

2019 ಡಿಸೆಂಬರ್ ಗೆಜೆಟ್ ನೋಟಿಫಿಕೇಶನ್ ಅನ್ವಯ ವ್ಯಕ್ತಿಯಿಂದ ವ್ಯಾಪಾರಿಗೆ ಪಾವತಿಸುವ ಯುಪಿಐ Person-to-Merchant (P2M) UPI ಪೇಮೆಂಟ್ ಗೆ ಜಿಎಸ್ಟಿ ಯನ್ನು ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ. ವ್ಯಕ್ತಿಯ ಅಕೌಂಟ್ನಿಂದ ಯಾವುದೇ ಶುಲ್ಕವನ್ನು ಕಡಿತಗೊಳಿಸುವುದನ್ನು ಹಣಕಾಸು ಅಯೋಗ ತೆಗೆದು ಹಾಕಿದೆ ಎಂದು ತಿಳಿಸಿದೆ.