second puc result : ಮರು ಮೌಲ್ಯಮಾಪನದಲ್ಲಿ ಬಂತು ಒಂದು ಅಂಕ | ತೀರ್ಥಹಳ್ಳಿ ದೀಕ್ಷಾ ರಾಜ್ಯಕ್ಕೆ ನಂಬರ್​ ಒನ್​

prathapa thirthahalli
Prathapa thirthahalli - content producer

second puc result : ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ದೀಕ್ಷಾ ಇದೀಗ ಮರು ಮೌಲ್ಯ ಮಾಪನದಲ್ಲಿ 600 ಕ್ಕೆ 600 ಅಂಕ ಪಡೆದಿದ್ದಾರೆ.

ಏಪ್ರಿಲ್​ 8 ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾದಾಗ ತೀರ್ಥಹಳ್ಳಿಯ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿ ದೀಕ್ಷಾ 600 ಅಂಕಕ್ಕೆ 599 ಅಂಕ ಪಡೆದಿದ್ದರು. ಅವರಿಗೆ ಕೆಮಿಸ್ಟ್ರಿಯಲ್ಲಿ 100 ಕ್ಕೆ 99 ಅಂಕ ಬಂದಿತ್ತು. ಫಲಿತಾಂಶ ಪ್ರಕಟಗೊಂಡ ನಂತರ ದೀಕ್ಷಾ ಆ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೆ ಹಾಕಿದ್ದರು. ಇದೀಗ ಅದರ ಫಲಿತಾಂಶ ಹೊರಬಿದ್ದಿದ್ದು, 600 ಕ್ಕೆ 600 ಅಂಕವನ್ನು ಪಡೆಯುವುದರ ಮೂಲಕ ತಾಲ್ಲೂಕಿನ ಹಾಗೂ ಜಿಲ್ಲೆಯೆ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

second puc result
ತೀರ್ಥಹಳ್ಳಿ ತಾಲೂಕಿನ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ

second puc result : ದೀಕ್ಷಾಗೆ ಅಭಿನಂದನೆ ಸಲ್ಲಿಸಿದ ಸಚಿವ  ಮಧು ಬಂಗಾರಪ್ಪ

ವಿದ್ಯಾರ್ಥಿನಿಯ ಈ ಸಾಧನೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

Share This Article