gold price decrease : ನಿನ್ನೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪಮಟ್ಟಿಗೆ ಇಳಿಕೆ ಕಂಡಿದೆ. ಹೂಡಿಕೆದಾರರು ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಮಾರಾಟ ಮಾಡುತ್ತಿರುವುದರಿಂದ ಬೆಲೆ ಮತ್ತಷ್ಟು ಇಳಿಕೆಯಾಗಿದೆ ಎನ್ನಲಾಗಿದೆ.

gold price decrease : ಎಷ್ಟಿದೆ ಇಂದಿನ ದರ
ಚಿನ್ನದ ದರದಲ್ಲಿ ಇಂದು ಬರೋಬ್ಬರಿ 45 ರೂಪಾಯಿ ಕಡಿಮೆ ಆಗಿದೆ. 22 ಕ್ಯಾರೆಟ್ನ ಚಿನ್ನದ ಬೆಲೆಯನ್ನು ನೋಡುವುದಾದರೆ 1 ಗ್ರಾಂ ಗೆ 8,710 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 49 ರೂಪಾಯಿ ಕಡಿಮೆ ಆಗಿದ್ದು 9,502 ರೂಪಾಯಿ ಗೆ ಇಳಿದಿದೆ.
ಇನ್ನು 10 ಗ್ರಾಂ ಗೆ ಎಷ್ಟಾಗಿದೆ ಎಂದು ನೋಡುವುದಾದರೆ, 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 450 ರೂಪಾಯಿ ಕಡಿಮೆ ಆಗಿದೆ. ಇಂದಿನ ಬೆಲೆ 87,100 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 490 ರೂ ಕಡಿಮೆ ಆಗಿ, ಇಂದಿನ ಬೆಲೆ 95,020 ರೂ ಆಗಿದೆ.
