theft case : ಕಳ್ಳರು ಮನೆಯ ಬಾಗಿಲನ್ನು ಒಡೆದು ನಗದು ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ನಗರದ ಬೊಮ್ಮನಕಟ್ಟೆಯ ವಾಸಿ ಪ್ರವೀಣ ಎಂಬುವವರು ಮನೆಯಲ್ಲಿ ನಡೆದಿದೆ. ಘಟನೆ ಸಂಬಂಧ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
theft case : ಹೇಗಾಯ್ತು ಘಟನೆ
ಮೇ 16 ರಂದು ಪ್ರವೀಣ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಶಿಕಾರಿಪುರ ತಾಲೂಕಿನಲ್ಲಿರುವ ಸಂಬಂಧಿಕರ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು.ಆ ದಿನ ಸಂಬಂಧಿಕರ ಮನೆಯಲ್ಲಿಯೇ ಉಳಿದಿದ್ದರು. ನಂತರ ಮಾರನೇ ದಿನ (ಮೇ 17) ಪ್ರವೀಣ್ ರವರ ಪಕ್ಕದ ಮನೆಯವರು ನಿಮ್ಮ ಮನೆಯ ಬಾಗಿಲನ್ನು ಯಾರೋ ಕಳ್ಳರು ಒಡೆದಿದ್ದಾರೆ ಎಂದು ಫೋನ್ ಮಾಡಿ ತಿಳಿಸಿದ್ದಾರೆ. ಕೂಡಲೇ ಗಾಬರಿಯಿಂದ ಮನೆಗೆ ಬಂದು ನೋಡಿದಾಗ ರೂಮ್ ನಲ್ಲಿ ಮರದ ಬೀರ್ ನಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನಗದು ಹಣ ಹಾಗೂ ಒಟ್ಟು 3.5 ಗ್ರಾಂ ತೂಕದ 20 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಪ್ರವೀಣ ಕಳ್ಳರನ್ನು ಪತ್ತೆ ಮಾಡಿ ವಸ್ತುಗಳನ್ನು ಹುಡುಕಿಕೊಡಬೇಕೆಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
