Shivamogga | Feb 11, 2024 | ಶಿವಮೊಗ್ಗದಲ್ಲಿ ಕಳ್ಳತನ ಹೇಗೆ ನಡೆಯುತ್ತಿದೆ ಎಂದು ಹೇಳುವುದೇ ಕಷ್ಟವಾಗಿದೆ ಪೊಲೀಸ್ ಇಲಾಖೆಯ ಸಂಯಮ ಕಳ್ಳರಿಗೂ ವರವಾಗುತ್ತಿದೆ. ಇಷ್ಟು ದಿನ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಳ್ಳತನ ಇದೀಗ ಶಿವಮೊಗ್ಗದ ಗಾಂಧಿ ಬಜಾರ್ ಗೆ ಶಿಫ್ಟ್ ಆದಂತಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಕಳೆದ ಏಳರಂದು ನಡೆದಿದ್ದು, ಈ ಸಂಬಂಧ ಇದೀಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದೆ
ದೊಡ್ಡಪೇಟೆ ಪೊಲೀಸ್ ಸ್ಟೇಷನ್
ಶಿವಮೊಗ್ಗದ ಹಳ್ಳಿಯೊಂದರಿಂದ ಬಂದಿದ್ದ ಅಕ್ಕತಂಗಿಯರು ಹಳೆಯ ಶಿವಮೊಗ್ಗದ ಬಹುದೊಡ್ಡ ಭಾಗವಾದ ಗಾಂಧಿ ಬಜಾರ್ನಲ್ಲಿ ಚಿನ್ನ ಖರೀದಿಸಿದ್ದಾರೆ. ಅಂಗಡಿಯೊಂದರಲ್ಲಿ ಚಿನ್ನ ಖರೀದಿಸಿ ಬಟ್ಟೆ ಮಾರ್ಕೆಟ್ ಸಮೀಪ ತೆರಳಿದ್ದಾರೆ. ಅಲ್ಲಿಯು ಅಗತ್ಯದ ಚಿನ್ನಾಭರಣವನ್ನ ಖರೀದಿಸಿದ್ದಾರೆ. ಹೀಗೆ ಸುತ್ತಾಡಿದ ಅಕ್ಕ-ತಂಗಿಯರು ಆ ಬಳಿಕ ಮಾರ್ಕೆಟ್ ಸಮೀಪದ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕೇಳಿ ತೆಗೆದುಕೊಂಡಿದ್ದಾರೆ.
ಜ್ಯೂಸ್ ಕುಡಿದು ಹಣ ಕೊಡಲು ವ್ಯಾನಿಟಿ ಬ್ಯಾಗ್ಗೆ ಕೈ ಹಾಕುವಾಗ ನೋಡಿದರೆ, ಅದರ ಜಿಪ್ ಅರ್ಧ ತೆಗೆದಿರುವುದು ಕಂಡಿದೆ. ತಕ್ಷಣ ಸಂಶಯ ಬಂದು ಬ್ಯಾಗ್ ಪೂರ್ತಿ ಓಪನ್ ಮಾಡಿದರೆ, ಅದರಲ್ಲಿ ಚಿನ್ನವಿದ್ದ ಪರ್ಸ್ ಕಣ್ಮರೆಯಾಗಿದೆ. ಇದಕ್ಕೂ ಮೊದಲು ಪರೀಕ್ಷಿಸಿದಾಗ ಇದ್ದಿದ್ದ ಪರ್ಸ್ ಜ್ಯೂಸ್ ಕುಡಿದು ಬಿಲ್ ನೀಡುವಷ್ಟರಲ್ಲಿ ಮಾಯವಾಗಿತ್ತು.
ಕೆಲವೇ ಕ್ಷಣದಲ್ಲಿ ಕೈ ಚಳಕ ತೋರಿದ ಕಳ್ಳ, ಚಿನ್ನ ಎಗರಿಸಿ ಮಾಯವಾಗಿದ್ದ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಕ್ಕತಂಗಿಯರ ಸುಮಾರು 37500/- ರೂ ಬೆಲೆ ಆಭರಣ ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
