ಬೆಂಗಳೂರಿಗೆ ಹೋದ ಗಾಂಧಿಬಜಾರ್ ವ್ಯಕ್ತಿ ಕಾಣೆ! ಮನೆಯಿಂದ ಹೊರಟ ಮಹಿಳೆಯರಿಬ್ಬರು ಮಿಸ್ಸಿಂಗ್! ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ

Gandhibazar man who went to Bengaluru goes missing Two women who left the house are missing! Inform the police if you get any clue about them

ಬೆಂಗಳೂರಿಗೆ ಹೋದ ಗಾಂಧಿಬಜಾರ್ ವ್ಯಕ್ತಿ ಕಾಣೆ! ಮನೆಯಿಂದ ಹೊರಟ ಮಹಿಳೆಯರಿಬ್ಬರು ಮಿಸ್ಸಿಂಗ್! ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ
Bengaluru ,Gandhibazar, missing

Shivamogga Mar 8, 2024 ಶಿವಮೊಗ್ಗದ ವಿವಿಧ ಪೊಲೀಸ್ ಸ್ಟೇಷನ್​ಗಳಿಂದ ಕಾಣೆಯಾದವರ ಬಗ್ಗೆ ಪ್ರಕಟಣೆ ನೀಡಲಾಗಿದೆ. ಅದರ ವಿವರವನ್ನು ನೋಡುವುದಾದರೆ,  ದೊಡ್ಡಪೇಟೆ ಪೊಲೀಸ್ ಸ್ಟೇಷನ್​  ವ್ಯಾಪ್ತಿಯಲ್ಲಿ ನಗರದ ಗಾಂಧಿಬಜಾರ್ 2ನೇ ಕ್ರಾಸ್ ವಾಸಿ ಚಿನ್ನಬೆಳ್ಳಿ ವ್ಯಾಪಾರಿ ಎ. ಮಂಜುನಾಥ್ ಬಿನ್ ಶ್ಯಾಮ್ ಎಂಬ 63 ವರ್ಷದ ವ್ಯಕ್ತಿ ಫೆ. 27 ರಂದು ಬೆಂಗಳೂರಿಗೆಂದು ಹೋದವರು ಈವರೆಗೂ ಹಿಂದಿರುಗಿರುವುದಿಲ್ಲ. ಈ ವ್ಯಕ್ತಿಯು ಸುಮಾರು 5.10 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಹೊಟ್ಟೆಯ ಎಡಭಾಗದಲ್ಲಿ ಆಪರೇಷನ್ ಮಾಡಿರುವ ಹಳೇ ಗಾಯದ ಗುರುತು ಇತ್ತದೆ. ಕನ್ನಡ, ತಮಿಳು, ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕ್ರೀಂ ಕಲರ್ ಶರ್ಟ್, ಮೆರೂನ್ ಕಲರ್ ಪ್ಯಾಂಟ್ ಧರಿಸಿರುತ್ತಾನೆ.  ಈ ವ್ಯಕ್ತಿಯ ಸುಳಿವು ಯಾರಿಗಾದರೂ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ದೂ.ಸಂ : 08182-261414, 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ದೊಡ್ಡಪೇಟೆ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



ಕೋಟೆ ಪೋಲಿಸ್ ಠಾಣೆ 

ಶಿವಮೊಗ್ಗ ಕೋಟೆ ಪೋಲಿಸ್ ಠಾಣೆ ವ್ಯಾಪ್ತಿಯ ವಿದ್ಯಾ ನಗರದ ದುರ್ಗಮ್ಮ ಬೀದಿ  ವಾಸಿ ಮಧು ಎಂಬುವವರ ಪತ್ನಿ ಪ್ರೇಮಾ ಎಂಬ 39 ವರ್ಷದ ಮಹಿಳೆ ಫೆ. 24 ರಂದು ರಾತ್ರಿ 8 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋದವರು  ಕಾಣೆಯಾಗಿದ್ದಾರೆ. 

ಈಕೆಯ ಚಹರೆ 5.2ಅಡಿ ಎತ್ತರ, ದೃಡ ಮೈಕಟ್ಟು, ದುಂಡು ಮುಖ, ಕಪ್ಪಕೂದಲು,  ಗೋದಿ ಮೈಬಣ್ಣ ಹೊಂದಿರುತ್ತಾರೆ.

ಈ ಮಹಿಳೆಯ ಸುಳಿವು ಪತ್ತೆಯಾದರೆ ಕೋಟೆ ಪೋಲಿಸ್ ಠಾಣೆ ಶಿವಮೊಗ್ಗ ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೋಲಿಸ್ ಸಬ್ ಇನ್ಸಪೆಕ್ಟರ್ ಶಿವಮೊಗ್ಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾ

ಕಾಣೆಯಾದವರ ಬಗ್ಗೆ ಮಾಹಿತಿ

ಬಾಪೂಜಿನಗರ ಬಿ.ಸಿ.ಎಂ ಹಾಸ್ಟೆಲ್‌ನಲ್ಲಿದ್ದು ಪ್ರಥಮ ಬಿ.ಎಡ್ ವಿದ್ಯಾಭ್ಯಾಸ ಮಾಡುತಿದ್ದ  ಚೈತ್ರ ಬಿನ್ ಹನುಮಂತಪ್ಪ ಎಂಬ 23 ವರ್ಷದ ಯುವತಿ  ಫೆ.20 ರಂದು ಸ್ವಂತ ಊರಾದ ಕೊಪ್ಪಳ ತಾ. ಹಿಟ್ನಾಳ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೋದವರು ಮನೆಗೂ ಹೋಗದೆ ಕಾಣೆಯಾಗಿದ್ದಾರೆ. 

ಯುವತಿಯು ಸುಮಾರು 5.2 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಕೋಲುಮುಖ, ಕಪ್ಪಕೂದಲು,  ಬಿಳಿ ಮೈಬಣ್ಣ ಹೊಂದಿದ್ದು,  ನೀಲಿಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಈಕೆಯ ಸುಳಿವು ಪತ್ತೆಯಾದರೆ ಕೋಟೆ ಪೋಲಿಸ್ ಠಾಣೆ ಶಿವಮೊಗ್ಗ ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೋಲಿಸ್ ಸಬ್ ಇನ್ಸಪೆಕ್ಟರ್ ಶಿವಮೊಗ್ಗ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.