Game Changer Shivamogga/ ಶಿವಮೊಗ್ಗ ತಿರುಪತಿ ಜಸ್ಟ್​ 8 ಗಂಟೆ ಜರ್ನಿ! ವಂದೇ ಭಾರತ್ ಟ್ರೈನ್​ ವೇಳಾಪಟ್ಟಿ ಅಚ್ಚರಿ ಮೂಡಿಸುತ್ತೆ!

ajjimane ganesh

Game Changer Shivamogga Vande Bharat timings 11 ಶಿವಮೊಗ್ಗಕ್ಕೆ ಬಂಪರ್ ಕೊಡುಗೆ: ಎರಡು ವಂದೇ ಭಾರತ್ ರೈಲುಗಳ ಬಗ್ಗೆ ಸಂಸದರಿಂದ ಅಧಿಕೃತ ಮಾಹಿತಿ 

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ವಂದೇ ಭಾರತ್​  ಕೊಡುಗೆ ದೊರೆತಿದೆ. ಸಂಸದ ಬಿ. ವೈ. ರಾಘವೇಂದ್ರ ಅವರು ಮಾಹಿತಿ ನೀಡಿರುವಂತೆ, ಆರಂಭದಲ್ಲಿ ಶಿವಮೊಗ್ಗದಿಂದ ಎರಡು ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ. 

Game Changer Shivamogga Vande Bharat Train Shivamogga
Vande Bharat Train Shivamogga

ಶಿವಮೊಗ್ಗದ ಪ್ರಥಮ ವಂದೇ ಭಾರತ್ ಮಾರ್ಗ 

Game Changer Shivamogga

ಸಂಸದ ರಾಘವೇಂದ್ರ ಅವರ ಪ್ರಕಾರ, ಈಗಾಗಲೇ ಎರಡು ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಮತ್ತು ರೈಲು ಸಂಖ್ಯೆಯನ್ನು ಅಂತಿಮಗೊಳಿಸಲಾಗಿದೆ. ಈ ರೈಲುಗಳು ಪ್ರಮುಖವಾಗಿ ಶಿವಮೊಗ್ಗ-ತಿರುಪತಿ ಮತ್ತು ಶಿವಮೊಗ್ಗ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಇದರಿಂದ ಪ್ರವಾಸಿಗರು, ಭಕ್ತರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

- Advertisement -

ಶಿವಮೊಗ್ಗ-ತಿರುಪತಿ ವಂದೇ ಭಾರತ್ ರೈಲು:

ಶಿವಮೊಗ್ಗದಿಂದ ಮುಂಜಾನೆ 4:30ಕ್ಕೆ ಹೊರಟು, ಮಧ್ಯಾಹ್ನ 12:30ಕ್ಕೆ ತಿರುಪತಿ ತಲುಪಲಿದೆ.

ಸಂಜೆ 4:30ಕ್ಕೆ ತಿರುಪತಿಯಿಂದ ಹೊರಟು, ರಾತ್ರಿ 12:30ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

 

ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ರೈಲು:

ಯಶವಂತಪುರ-ಶಿವಮೊಗ್ಗ ನಡುವೆ ಸಂಚಾರ ನಡೆಸುವ ಈ ರೈಲಿನ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಈ ರೈಲು ಶಿವಮೊಗ್ಗ ಬೆಂಗಳೂರು ನಡುವಿನ ಪ್ರಯಾಣದ ಅವದಿಯನ್ನು ಕಡಿಮೆ ಮಾಡಲಿದೆ. 

Game Changer Shivamoggasigandur bridge
sigandur bridge ಸಿಗಂದೂರು ಸೇತುವೆ ವೀಕ್ಷಿಸಿದ ಸಂಸದರು

ರೈಲುಗಳ ಸಂಚಾರ ಆರಂಭದ ನಿಖರ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲವಾದರೂ, ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.

 

ಭವಿಷ್ಯದಲ್ಲಿ ಶಿವಮೊಗ್ಗದಿಂದ ಶಿವಮೊಗ್ಗ-ಎರ್ನಾಕುಲಂ, ಶಿವಮೊಗ್ಗ-ಬಗಲ್‌ಪುರ, ಶಿವಮೊಗ್ಗ-ಜೆಮ್‌ಶೆಡ್‌ಪುರ, ಶಿವಮೊಗ್ಗ-ಚಂಡೀಗಢ, ಶಿವಮೊಗ್ಗ-ಗೌಹಾಟಿ ಸೇರಿದಂತೆ ಹಲವು ಹೊಸ ರೈಲುಗಳು ಸಂಚಾರ ನಡೆಸಲಿವೆ. 

 

ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಶಿವಮೊಗ್ಗಕ್ಕೆ ಬಸ್ ಮತ್ತು ವಿಮಾನ ಸಂಪರ್ಕ ಈಗಾಗಲೇ ಇದೆ. ವಂದೇ ಭಾರತ್ ರೈಲುಗಳ ಸೇರ್ಪಡೆಯು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ.

Central government announces two Vande Bharat Express trains for Shivamogga, connecting to Tirupati and Bengaluru. MP B. Y. Raghavendra shared details on the new routes and the upcoming Railway Coaching Depot in Koteganguru.

Shivamogga Vande Bharat timings, Vande Bharat Express, Shivamogga railway, BY Raghavendra, Tirupati Vande Bharat, Bengaluru Vande Bharat, Railway Coaching Depot Shivamogga, Koteganguru, Karnataka railway development, New trains Shivamogga, Indian Railways, Travel Karnataka, English Hashtags: #VandeBharat #Shivamogga #IndianRailways #Karnataka #NewTrains #RailwayDevelopment #Tirupati #Bengaluru #TravelNews #IndiaTrains

Game Changer Shivamogga Vande Bharat timings 11

Share This Article
Leave a Comment

Leave a Reply

Your email address will not be published. Required fields are marked *