ಮಹಿಳೆಯರಿಗೆ ಉಚಿತ ಹೊಲಿಗೆ ಮಷಿನ್ ವಿತರಣೆ! ಯಾರಿಗೆಲ್ಲಾ ಅವಕಾಶ! ಇಲ್ಲಿದೆ ವಿವರ

ajjimane ganesh

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ :  ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಯೋಜನೆಗೆ ಕರ್ನಾಟಕ ಮರಾಠ ನಿಗಮದಿಂದ ಅರ್ಜಿ ಆಹ್ವಾನ , ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಅವಕಾಶ, ₹98,000 ವಾರ್ಷಿಕ ಆದಾಯ ಮಿತಿ, ಅರ್ಜಿ ಸಲ್ಲಿಸಲು ಡಿಸೆಂಬರ್ 06 ಕೊನೆಯ ದಿನಾಂಕ.

social media viral video ಮಲಗಿದ್ದಾತನ ಮೇಲೆ ಹರಿದು ಹೋದ ಬೃಹತ್​ ಗಾತ್ರದ ಕಾಳಿಂಗ | ಎದೆ ಝಲ್​ ಎನಿಸೋ ವಿಡಿಯೋ ವೈರಲ್​

ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು 2025-26ನೇ ಆರ್ಥಿಕ ಸಾಲಿನ  ಹೊಲಿಗೆ ಯಂತ್ರ ವಿತರಣಾ ಯೋಜನೆ ಜಾರಿಗೊಳಿಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮರಾಠ ಪ್ರವರ್ಗ-3B ಅಡಿಯಲ್ಲಿ ಗುರುತಿಸಲಾದ 2A ಯಿಂದ 2F ವರೆಗೆ ಇರುವ ಉಪ-ಸಮುದಾಯಗಳಿಗೆ ಸೇರಿದ, 18 ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ಈ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. 

Maratha Corporation Opens Applications for Free Sewing Machine Distribution!
Maratha Corporation Opens Applications for Free Sewing Machine Distribution!

ಹೊಲಿಗೆ ಯಂತ್ರ ವಿತರಣಾ ಯೋಜನೆ ನಿಯಮಗಳು/Free Sewing Machine Distribution

  1. ಅರ್ಜಿದಾರರು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನಮೂನೆ 3Bಯಲ್ಲಿ ಕಡ್ಡಾಯವಾಗಿ ಪಡೆದಿರಬೇಕು. 
  2. ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶದವರಿಗೆ ₹98,000 ಮತ್ತು ನಗರ ಪ್ರದೇಶದವರಿಗೆ ₹1.20 ಲಕ್ಷ ಎಂದು ನಿಗದಿಪಡಿಸಲಾಗಿದೆ.
  3. ಒಂದು ಕುಟುಂಬಕ್ಕೆ ಒಬ್ಬ ಸದಸ್ಯರನ್ನು ಮಾತ್ರ ಈ ಸೌಲಭ್ಯಕ್ಕಾಗಿ ಪರಿಗಣಿಸಲಾಗುವುದು. ಅರ್ಜಿದಾರರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಈ ಸಹಾಯವನ್ನು ಒದಗಿಸಲಾಗುತ್ತಿದೆ.
  4. ಈ ಯೋಜನೆಯಡಿ ಅಂಗವಿಕಲ ಮಹಿಳೆಯರಿಗೆ ಶೇಕಡಾ 5%, ಸಾಮಾನ್ಯ ಮಹಿಳೆಯರಿಗೆ ಶೇಕಡಾ 33% ಹಾಗೂ ತೃತೀಯ ಲಿಂಗಿಗಳಿಗೆ ಶೇಕಡಾ 1% ಮತ್ತು ಅವಿವಾಹಿತ ಮಹಿಳೆಯರಿಗೆ ಶೇಕಡಾ 2% ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. 
  5. ವಿಧವೆಯರು, ಪರಿತ್ಯಕ್ತ ಮಹಿಳೆಯರು ಮತ್ತು ಹೆಚ್.ಐ.ವಿ. ಪೀಡಿತ ಮಹಿಳೆಯರಿಗೆ ಗರಿಷ್ಠ ವಯೋಮಿತಿ 35 ವರ್ಷಗಳನ್ನು ಮೀರಿರಬಾರದು ಎಂಬ ನಿಯಮವಿದೆ. ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದ (Discretionary Quota) ಮೂಲಕ ಸೌಲಭ್ಯ ಪಡೆಯಲು ಇಚ್ಛಿಸುವವರೂ ಸಹ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.  

ಮಾನವೀಯತೆ ಮೆರೆದಿದ್ದೇ ಕೊಲೆಗೆ ಕಾರಣವಾಯ್ತು.. ದುಮ್ಮಳ್ಳಿ ಮಹಿಳೆ ಕೊಲೆಯ ಅಸಲಿ ಕಹಾನಿ, ಜೆಪಿ ಬರೆಯುತ್ತಾರೆ

ಆಸಕ್ತ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್‌ನ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳ ಮೂಲಕ ಡಿಸೆಂಬರ್ 06 ರೊಳಗೆ ಅರ್ಜಿಗಳನ್ನು ಸಲ್ಲಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಿಗಮದ ವೆಬ್‌ಸೈಟ್ www.kmcdc.karnataka.gov.in ಅಥವಾ ಶಿವಮೊಗ್ಗದ ಗಾಂಧಿನಗರದಲ್ಲಿರುವ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು (ದೂ.ಸಂ.: 08182-229634) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Maratha Corporation Opens Applications for Free Sewing Machine Distribution!
Maratha Corporation Opens Applications for Free Sewing Machine Distribution!

ಡಿಸೆಂಬರ್​ ಒಳಗೆ ಶಿವಮೊಗ್ಗದಲ್ಲಿ ಗುಂಡಿ ಇರಲ್ಲ, ಇ-ಪೇಪರ್​ನಲ್ಲಿ ಇನ್ನಷ್ಟು ಸುದ್ದಿಗಳು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Maratha Corporation Opens Applications for Free Sewing Machine Distribution!

Share This Article