Training ಶಿವಮೊಗ್ಗ, ಆಗಸ್ಟ್ 25 ಮಲೆನಾಡುಟುಡೆ ನ್ಯೂಸ್: ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ ಆರು ತಿಂಗಳ ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ ತರಬೇತಿಯನ್ನು ನೀಡಲಾಗುತ್ತಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಲಾಗಿದೆ. ವಾರ್ತಾ ಇಲಾಖೆ ಮೂಲಕ ನೀಡಲಾಗಿರುವ ಪ್ರಕಟಣೆಯ ಪ್ರಕಾರ, ಭಾರತ್ ಕೆರಿಯರ್ ಕನೆಕ್ಟ್ ಸೊಲ್ಯೂಷನ್ಸ್ ಜೊತೆಗೂಡಿ ಅಪೋಲೊ ಮೆಡ್ ಸ್ಕಿಲ್ಸ್ ಈ ತರಬೇತಿ ಆಯೋಜಿಸಿದೆ.

ಷರತ್ತು
- ಈ ತರಬೇತಿಗೆ ಅರ್ಹರಾಗಲು ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷದೊಳಗಿರಬೇಕು
- ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
ತರಬೇತಿ ಮುಗಿದ ನಂತರ ಆಸ್ಪತ್ರೆಗಳು, ವೃದ್ಧಾಶ್ರಮಗಳು ಮತ್ತು ಹಿರಿಯರ ಆರೈಕೆ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಲಾಗುತ್ತದೆ ಎಂದು ತಿಳಸಿಲಅಗಿದೆ.
- Advertisement -
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಪಡೆಯಲು 953560288, 6362902311, ಅಥವಾ 6362902335 ಸಂಖ್ಯೆಗಳಿಗೆ ಸಂಪರ್ಕಿಸಬಹುದು (Contact). ಇದು ಉದ್ಯೋಗ (Employment) ಪಡೆಯಲು ಬಯಸುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ ಎಂದು ತಿಳಿಸಲಾಗಿದೆ.
