shivamogga Mar 13, 2024 BY Raghavendra , arecanut imports ವಿದೇಶಗಳಿಂದ ಅಡಕೆ ಆಮದು ತಡೆಯಲು ಹಣಕಾಸು ಇಲಾಖೆ ವಿದೇಶಿ ಅಡಕೆಗೆ ಹೆಚ್ಚಿನ ಸೆಸ್ ವಿಧಿಸಿದೆ. ಆದರೆ, ಈಗ ಕಳ್ಳ ಹಾದಿಯಲ್ಲಿ ಅಡಕೆ ಆಮದಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಪ್ರಮುಖವಾಗಿ ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವರ ಗಮನಕ್ಕೆ ಅಡಕೆ ಆಮದು ವಿಷಯ ತಂದಿದ್ದು, ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಲೆನಾಡಿನ ಅಡಕೆ ಬೆಳೆಗಾರರ ಹಿತ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಮ್ಯಾಮ್‌ಕೋಸ್ ಹಾಗೂ ಆಪ್‌ಕೋಸ್ ಪ್ರಮುಖರೊಂದಿಗೂ ಚರ್ಚಿಸಿದ್ದು ಅಡಕೆ ಆಮದು ತಡೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಾರೆ ಎಂಬುದು ತಪ್ಪು ಕಲ್ಪನೆ. ಈಶ್ವರಪ್ಪ ಅವರು ಪಕ್ಷದ ವಿರುದ್ಧ ಚುನಾವಣೆ ಮಾಡುತ್ತಾರೆ ಎಂಬುದು ಸುಳ್ಳು ಸಂದೇಶ. ಅವರು ನಮ್ಮೊಂದಿಗೆ ಇರುತ್ತಾರೆ. ಅಂತಹ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.