ಶಿವಮೊಗ್ಗ : ಗಾಂಧಿ ಪಾರ್ಕ್​ನಲ್ಲಿನ ಮಕ್ಕಳ ರೈಲಿನ ಇಂಜಿನ್​ನಲ್ಲಿ ಸಮಸ್ಯೆ! ದಟ್ಟ ಹೊಗೆ!

ajjimane ganesh

ನವೆಂಬರ್, 08, 2025 ರ ಮಲೆನಾಡು ಟುಡೆ ಸುದ್ದಿ :  ಟ್ರೈನ್​ ಸಂಚರಿಸುವಾಗ ಅದರ ಚಕ್ರದಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಆಗಾಗ ಕೇಳುವ ಸಂಗತಿ, ಆದರೆ ಟಾಯ್ ಟ್ರೈನ್​ನಲ್ಲಿಯು ಬೆಂಕಿಕಾಣಿಸಿಕೊಳ್ಳುತ್ತಾ? ಹೌದು ಎನ್ನುವುದಕ್ಕೆ ಶಿವಮೊಗ್ಗದ ಗಾಂಧಿ ಪಾರ್ಕ್​ನಲ್ಲಿ ಪುಟಾಣಿ ಟ್ರೈನ್ ಸಾಕ್ಷಿಯಾಗಿದೆ. ಇಲ್ಲಿಗೆ ಬರುವ ಮಕ್ಕಳಿಗೆ ರೈಲು ಸಂಚಾರದ ಅನುಭವ ನೀಡುವ ಈ ಟ್ರೈನ್​ ಇಂಜಿನ್​ನಲ್ಲಿ ಇವತ್ತು, ದರಲೆ ಮಣ್ಣಿನ ಅಡಿಯಿಂದ ಹೊಗೆ ಬಂದ ಹಾಗೆ, ಹೊಗೆ ಬರುತ್ತಿತ್ತು. ಎಂತಹ ಸಮಸ್ಯೆ ಅಂತಾ ಗೊತ್ತಾಗದೆ ಕೆಲವು ಹೊತ್ತು ಪೋಷಕರು ಸಹ ಆತಂಕಗೊಂಡಿದ್ದರು. 

Fire Breaks Out in Shivamogga Toy Train Immediate Action Averts Disaster
Fire Breaks Out in Shivamogga Toy Train Immediate Action Averts Disaster

ಶಿವಮೊಗ್ಗ ಜೈಲು ಗೇಟ್​ನಲ್ಲಿಯೇ ವಾಸೀಂ ಅರೆಸ್ಟ್!, ಮಾಳೂರು ಸಮೀಪ ಬಾಣಂತಿ ಸಾವು! ಶಿವಮೊಗ್ಗದಲ್ಲಿ ಏನೆಲ್ಲಾ ಆಯ್ತು!

ತಾಂತ್ರಿಕ ದೋಷದಿಂದಾಗಿ ರೈಲಿನ ಇಂಜಿನ್ ಭಾಗದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದರಿಂದ, ರೈಲಿನಲ್ಲಿದ್ದ ಪೋಷಕರು ತಮ್ಮ ಮಕ್ಕಳನ್ನು ಹಿಡಿದುಕೊಂಡು ರೈಲಿನಿಂದ ಇಳಿಯಲು ಮುಂದಾದರು. ಪುಟಾಣಿ ರೈಲು ಹೆಚ್ಚು ವೇಗದಲ್ಲಿ ಓಡೋದಿಲ್ಲ. ಹೀಗಾಗಿ ಕೆಲವು ಪೋಷಕರು ತಮ್ಮ ಮಕ್ಕಳ ಜೊತೆಗೆ ಕೆಳಕ್ಕೆ ಹಾರಿದರು. 

ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ

ಇನ್ನೇನು ಎಂತ ಆಯ್ತು ಅಂತಾ ನೋಡುವಷ್ಟರಲ್ಲಿ ಸ್ಥಳಕ್ಕೆ ಬಂದ ಸಿಬ್ಬಂದಿ ಇಂಜಿನ್​ನೊಳಗೆ ಆಗಿದ್ದ ದೋಷವನ್ನು ಸರಿಪಡಿಸಿದ್ರು. ಹೊಗೆ ನಿಂತು, ಟ್ರೈನ್ ಪುನಃ ಹೊರಟಿತು

Fire Breaks Out in Shivamogga Toy Train Immediate Action Averts Disaster
Fire Breaks Out in Shivamogga Toy Train Immediate Action Averts Disaster

ಶರಾವತಿ ವಿಚಾರದಲ್ಲಿ ಉಗ್ರಹೋರಾಟಕ್ಕೆ ಅಣಿ! ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Fire Breaks Out in Shivamogga Toy Train Immediate Action Averts Disaster

Share This Article