fire accident in Auto complex ಶಿವಮೊಗ್ಗ, malenadu today news: ನಿನ್ನೆ ದಿನ ಶಿವಮೊಗ್ಗ ನಗರದ ಅಟೋ ಕಾಂಪ್ಲೆಕ್ಸ್ನಲ್ಲಿ ಅಗ್ನಿ ಅವಘಡವೊಂದು ಸಂಭವಿಸಿತ್ತು. ಘಟನೆಯಲ್ಲಿ ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು.
ಆಟೋ ಕಾಂಪ್ಲೆಕ್ಸ್ನಲ್ಲಿ ನಡೆದಿದ್ದೇನು?
ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್‌ನ ಗ್ಯಾರೇಜ್ ಒಂದರಲ್ಲಿ ಘಟನೆ ಸಂಭವಿಸಿದೆ. ದಟ್ಟ ಹೊಗೆಯನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಬಳಿ ಕಾರ್ಯಾಚರಣೆ ನಡೆದು ಬೆಂಕಿ ನಂದಿಸಲಾಯಿತು. ಡಸ್ಟರ್, ಇಕೋ ಸ್ಪೋರ್ಟ್ಸ್ ಕಾರು ಘಟನೆಯಲ್ಲಿ ಸುಟ್ಟು ಹೋಗಿವೆ. ಇನ್ನೊಂದು ಟಾಟಾ ಸುಮೋ ವಾಹನ ಅರ್ಧದಷ್ಟು ಸುಟ್ಟಿದೆ. ಗ್ಯಾರೆಜ್ ಭಾನುವಾರ ರಜೆಯಾದ್ದರಿಂದ ಘಟನೆಯ ಬಗ್ಗೆ ತಕ್ಷಣಕ್ಕೆ ಮಾಹಿತಿ ಗೊತ್ತಾಗಲಿಲ್ಲ. ಹಾಗಾಗಿ ಬೆಂಕಿ ದೊಡ್ಡದಾಗಿ ವ್ಯಾಪಿಸಿತು. ಇನ್ನೂ ಘಟನೆಯ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಸಹ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ. ಇನ್ನೂ ಈ ವರೆಗೂ ಘಟನೆಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ.
fire accident in Auto complex
