facebook : ಫೇಸ್​​ಬುಕ್​ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡಿದವನಿಗೆ ಶಾಕ್​ | ಏನಿದು ಪ್ರಕರಣ

prathapa thirthahalli
Prathapa thirthahalli - content producer

facebook : ಪ್ರಸ್ತುತ ತಂತ್ರಜ್ಞಾನ ಬೆಳವಣಿಗೆಯಿಂದ ಮೊಬೈಲ್​ ಬಳಕೆದಾರರು ಎಷ್ಟು ಜಾಗರೂಕರಾಗಿದ್ದರೂ ಸಹ ಸಾಕಾಗುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಆನ್ಲೈನ್​ ಗೇಮಿಂಗ್​ ಹಣ ಹೂಡಿಕೆ ಸೇರಿದಂತೆ ಇನ್ನಿತರೆ ಮೂಲಗಳಿಂದ ಹಣ ಗಳಿಸುವಂತೆ ನಮ್ಮಲ್ಲಿ ಆಸೆ ಮೂಡಿಸಿ ಹಣ ಹೂಡಿಕೆ ಮಾಡಿಸಿ ಸೈಬರ್​​ ಸಂಚುಕೋರರು ನಮ್ಮಲ್ಲಿ ಹಣ ಪೀಕಿಸಲು ಕಾಯುತ್ತಿರುತ್ತಾರೆ. ಅದರೆಂತೆ ಶಿವಮೊಗ್ಗದಲ್ಲಿ ಸಹ ಉದ್ಯಮಿಯೊಬ್ಬರು ಮಹಿಳೆಯೊಬ್ಬರಿಂದ  ಫೇಸ್​ಬುಕ್​​ನಲ್ಲಿ ಬಂದಿದ್ದ ರಿಕ್ವೆಸ್ಟ್​​ನ್ನು ಅಕ್ಸೆಪ್ಟ್​  ಮಾಡಿ ಹಣ ಹೂಡಿಕೆ ಮಾಡಿ ಪೇಚಿಗೆ ಸಿಲುಕಿದ್ದಾರೆ.

facebook : ಏನಿದು ಪ್ರಕರಣ

ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಫೇಸ್​ಬುಕ್​ನಲ್ಲಿ ಮಹಿಳೆಯೊಬ್ಬರಿಂದ ಫ್ರೆಂಡ್​ ರಿಕ್ವೆಸ್ಟ್​ ಬಂದಿತ್ತು. ಅದನ್ನು ಉದ್ಯಮಿ ಅಕ್ಸೆಪ್ಟ್​ ಮಾಡಿದ್ದರು. ಕೆಲ ದಿನಗಳ ನಂತರ ಉದ್ಯಮಿ ಹಾಗೂ ಮಹಿಳೆ  ಚಾಟಿಂಗ್​ ಮುದುವರೆದಿತ್ತು. ಒಂದು ದಿನ ಆ ಮಹಿಳೆ ಉದ್ಯಮಿಗೆ ನಾನು ನಾನು ಮುಂಬಯಿಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇನೆ. ನೀವು ಸಹ ಹಣ ಹೂಡಿಕೆ ಮಾಡಿ  ಉತ್ತಮ ಲಾಭ ಗಳಿಸಬಹುದು ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ ಹಣ ಕಳಿಸಲು ವಾಟ್ಸಪ್‌ನಲ್ಲಿ ಲಿಂಕ್‌ವೊಂದನ್ನು ಸಹ  ಕಳಿಸಿದ್ದಳು. ಆ ಲಿಂಕ್ ಮೂಲಕ ಉದ್ಯಮಿ ಮೊದಲು 50 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಬಳಿಕ ಅವರ ಖಾತೆಗೆ ಲಾಭಾಂಶವನ್ನೂ ಕಳಿಸಲಾಗಿತ್ತು. ಇದನ್ನು ನಂಬಿದ ಉದ್ಯಮಿ ಮಹಿಳೆ ತಿಳಿಸಿದ ಬ್ಯಾಂಕ್‌ ಖಾತೆ, ಯುಪಿಐ ಐಡಿಗಳಿಗೆ ತನ್ನ ಮಗ ಹಾಗೂ ಸ್ನೇಹಿತರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 1.44.800 ರೂ. ಕಳಿಸಿದ್ದಾರೆ. ಇದಾದ ವಾರದ ಬಳಿಕ ಅವರ ಖಾತೆಗಳಿಂದ ಹಣ ವಿತ್ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ವೇಳೆ ಸಂಬಂಧಪಟ್ಟವರನ್ನು ಉದ್ಯಮಿ ಸಂಪರ್ಕಿಸಿದಾಗ ತೆರಿಗೆ ಪಾವತಿಸಬೇಕೆಂದು ಸೂಚಿಸಿದ್ದಾರೆ. ನನ್ನ ಬಳಿ ಹಣವಿಲ್ಲ. ತೆರಿಗೆ ಹಣ ಕಡಿತ ಮಾಡಿ ಉಳಿದ ಹಣವನ್ನಾದರೂ ನೀಡಿ ಎಂದು ಉದ್ಯಮಿ ಕೋರಿದಾಗ ಅವರ ಮನವಿಯನ್ನು ತಿರಸ್ಕರಿಸಲಾಯಿತು.

ಈ ಸಂಬಂಧ ವಂಚನೆಗೊಳಗಾದ ಉದ್ಯಮಿ ಇದೀಗ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದಾರೆ

 

TAGGED:
Share This Article