BHADRAVATI | ಕಾರು ಲಾರಿ ಡಿಕ್ಕಿ | ಅತ್ತಿಗೆ -ಮೈದುನನ ಕದನ | ಅನುಮಾನಸ್ಪದ ವ್ಯಕ್ತಿ @Top news

Details of various events that took place in Bhadravati Taluk of Shimoga district ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದ ವಿವಿಧ ಘಟನೆಗಳ ವಿವರ

BHADRAVATI | ಕಾರು ಲಾರಿ ಡಿಕ್ಕಿ |  ಅತ್ತಿಗೆ -ಮೈದುನನ ಕದನ |  ಅನುಮಾನಸ್ಪದ ವ್ಯಕ್ತಿ @Top news

KARNATAKA NEWS/ ONLINE / Malenadu today/ Nov 5, 2023 SHIVAMOGGA NEWS

SHIVAMOGGA |  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಕಾರು ಹಾಗೂ ಲಾರಿ ನಡುವೆ ಅಪಘಾತವಾದ ಘಟನೆ ನಡೆದಿದೆ. ವಿಷಯ ತಿಳಿಸು ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ  ವಾಹನಗಳನ್ನು ಠಾಣೆಗೆ ಕಳುಹಿಸಿ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. 


ಅನುಮಾನಸ್ಪದ ವ್ಯಕ್ತಿಗಳ ವಿರುದ್ಧ ದೂರು

ಇನ್ನೊಂದಡೆ ಭದ್ರಾವತಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ  ಅನುಮಾನಸ್ಪದವಾಗಿ ಕೆಲವರು ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಪೊಲೀಸರಿಗೆ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅನುಮಾನಕ್ಕೆ ಕಾರಣವಾದವರನ್ನ ವಿಚಾರಿಸಿದ್ದಾರೆ. ಬಳಿಕ ಅವರು ಸಮೀಪದ ಊರಿನವರು ಎಂದು ಗೊತ್ತಾಗಿದ್ದು, ಅವರ ಫೋಷಕರನ್ನ ಕರೆಸಿಕೊಂಡು ವಾಪಸ್ ಕಳುಹಿಸಲಾಗಿದೆ 


ಅತ್ತಿಗೆ ಮೈದುನನ ಜಗಳ 

ಭದ್ರಾವತಿ ಓಲ್ಡ್​ ಟೌನ್​ನಲ್ಲಿ ಅತ್ತಿಗೆ ಹಾಗೂ ಮೈದುನನ ನಡುವೆ ಗಲಾಟೆ ನಡೆದು ಸ್ಥಳಕ್ಕೆ ಓಲ್ಡ್​ ಟೌನ್​ ಪೊಲೀಸರು ಬರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ದೂರು ಆಲಿಸಿ ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರಿಗೂ ಬುದ್ದಿವಾದ ಹೇಳಿ ಇನ್ನೊಮ್ಮೆ ಜಗಳವಾಡದಂತೆ ಎಚ್ಚರಿಕೆ ನೀಡಿದರು. ಆದಾಗ್ಯು ಸಮಸ್ಯೆ ಬಗೆಹರಿಯದ ಕಾರಣಕ್ಕೆ ಸ್ಟೇಷನ್​ಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.