20 ವರ್ಷ ಶಿಕ್ಷೆ | ಒಂದು ಕಾಲು ಲಕ್ಷ ದಂಡ | 17 ಲಕ್ಷ ಪರಿಹಾರ! ಅಪರಾಧಿಗಳಿಗೆ ವಾರ್ನಿಂಗ್​!? ಏನಿದು ಕೇಸ್​

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Nov 4, 2023 SHIVAMOGGA NEWS

SHIVAMOGGA | ಶಿವಮೊಗ್ಗ ಕೋರ್ಟ್​ ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಯೊಬ್ಬನಿಗೆ 20 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಷ್ಟೆ ಅಲ್ಲದೆ ಒಂದು ಕಾಲು ಲಕ್ಷ ರೂಪಾಯಿ ದಂಡ ಹಾಕಿದೆ. 

ಏನಿದು ಪ್ರಕರಣ

2020ನೇ ಸಾಲಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 23 ವರ್ಷದ ಯುವಕನೊಬ್ಬ 16 ವರ್ಷದ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪ ಕೇಳಿ ಬಂದಿತ್ತು. ಅಲ್ಲದೆ ಈ ಘಟನೆ ಬೆನ್ನಲ್ಲೆ  ಬಾಲಕಿಯು ನೇಣು ಹಾಕಿ ಕೊಂಡು ಮೃತಪಟ್ಟಿದ್ದಳು. ತದನಂತರ ನೋಂದ ಕುಟುಂಬದಲ್ಲಿ,  ಮೃತ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. 

ಅಂದಿನ ಠಾಣಾ ತನಿಖಾಧಿಕಾರಿಗಳಾದ  ಗಿರೀಶ್ ಬಿ.ಸಿ, ಪೊಲೀಸ್ ವೃತ್ತ ನಿರೀಕ್ಷಕರು, ಹೊಸನಗರ ವೃತ್ತ ರವರು ಆರೋಪಿತನ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಕೋರ್ಟ್​ನಲ್ಲಿ  ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ಮತ್ತು ಮಮತ ಪ್ರಕರಣದ ವಾದ ಮಂಡಿಸಿದ್ದರು.. 

FTSC-1  ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಲತಾ ರವರು ದಿನಾಂಕಃ 04-11-2023 ರಂದು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,25,000/-  ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಹಾಗೂ ಮೃತ  ಬಾಲಕಿಯ ಕುಟುಂಬಸ್ಥರಿಗೆ ಪರಿಹಾರವಾಗಿ ಸರ್ಕಾರದಿಂದ 17,00,000/- ನೀಡಲು ಆದೇಶಿಸಿದ್ದಾರೆ. 

 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor