erv police : ಪೊಲೀಸರ ಸಣ್ಣ ಪ್ರಯತ್ನ, ತಪ್ಪಿತು ದೊಡ್ಡ ಅನಾಹುತ
ಗೊಂದಿ ಅಣೆಕಟ್ಟಿನ ಬಳಿ ಅಪಾಯಕಾರಿ ಪ್ರದೇಶದಲ್ಲಿ ಈಜಲು ತೆರಳಿದ್ದ ಮಕ್ಕಳಿಗೆ ERV ಪೊಲೀಸ್ ಸಿಬ್ಬಂದಿಗಳು ತಿಳುವಳಿಕೆ ಮಾತುಗಳನ್ನು ಹೇಳಿ ಮನೆಗೆ ಕಳುಹಿಸಿದ್ದಾರೆ.
ಭದ್ರಾವತಿಯ ಗೋಂದಿ ಅಣೆಕಟ್ಟಿನ ಪ್ರದೇಶದಲ್ಲಿ ಜೂನ್ 08 ರಂದು ನಾಲೈದು ಮಕ್ಕಳು ಈಜಲು ತೆರಳಿದ್ದರು. ಆ ಪ್ರದೇಶದಲ್ಲಿ ನೀರು ಹೆಚ್ಚಿದ್ದು, ಅದು ಅಪಾಯಕಾರಿ ಪ್ರದೇಶವಾಗಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮಕ್ಕಳಿಗೆ ಸೂಕ್ತ ತಿಳುವಳಿಕೆ ಹೇಳಿ ಮನೆಗೆ ಕಳುಹಿಸಿದ್ದಾರೆ. ಪೊಲೀಸರ ಸೂಕ್ತ ಸಮಯ ಪ್ರಜ್ಙ್ನೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
TAGGED:erv police

