electric shock / ಸೆಕೆಂಡ್ ಪ್ಲೋರ್​ ಕಬ್ಬಿಣ ಸಾಗಿಸ್ತಿದ್ದಾಗ ಆಘಾತ/ ಸಂಭವಿಸಿತು ದುರಂತ

Malenadu Today

electric shock  ಶಿವಮೊಗ್ಗದಲ್ಲಿ ಕಟ್ಟಡಕ್ಕೆ ಕಬ್ಬಿಣದ ರಾಡ್‌ಗಳನ್ನು ಎಳೆಯವ ಸಂದರ್ಭದಲ್ಲಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಕಬ್ಬಿಣದ ರಾಡ್ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲಿಯೇ ಪಕ್ಕದಲ್ಲಿ ಹಾದು ಹೊಗಿದ್ದ ಕರೆಂಟ್ ವಯರ್‌ ತಗುಲಿದ ಪರಿಣಾಮ ವಿದ್ಯುತ್ ವ್ಯಕ್ತಿಗೆ ತಗಲಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತರನ್ನು ಸೋಮಿನಕೊಪ್ಪದ ನಿವಾಸಿ ನಿಜಾಮುಲ್‌ ಹಕ್‌  32 ವರ್ಷ ಎಂದು ಗುರುತಿಸಲಾಗಿದೆ. 

electric shock / ವಿದ್ಯುತ್ ಶಾಕ್

ಇವರು ಜೆ.ಹೆಚ್‌.ಪಟೇಲ್‌ ಬಡಾವಣೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕೆ ತೆರಳಿದ್ದರು. ನೆಲದಿಂದ ಎರಡನೇ ಮಹಡಿಗೆ ಕಬ್ಬಿಣದ ರಾಡ್‌ಗಳನ್ನು ಎಳೆಯುವಾಗ ಘಟನೆ ಸಂಭವಿಸಿದೆ. ತಕ್ಷಣವೇ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

electric shock

 

Share This Article