ತಾಳಗುಪ್ಪ ಟ್ರೈನ್​ಗೆ ಸಿಲುಕಿ ಹಿರಿಯರೊಬ್ಬರ ಸಾವು! ಆತ್ಮಹತ್ಯೆ ಮಾಡಿಕೊಂಡರ ನಿವೃತ್ತ ಉಪನ್ಯಾಸಕರು?

Elderly man dies after being hit by Talaguppa train Did retired lecturers commit suicide?ತಾಳಗುಪ್ಪ ಟ್ರೈನ್​ಗೆ ಸಿಲುಕಿ ಹಿರಿಯರೊಬ್ಬರ ಸಾವು! ಆತ್ಮಹತ್ಯೆ ಮಾಡಿಕೊಂಡರ ನಿವೃತ್ತ ಉಪನ್ಯಾಸಕರು?

ತಾಳಗುಪ್ಪ ಟ್ರೈನ್​ಗೆ ಸಿಲುಕಿ ಹಿರಿಯರೊಬ್ಬರ ಸಾವು! ಆತ್ಮಹತ್ಯೆ ಮಾಡಿಕೊಂಡರ ನಿವೃತ್ತ ಉಪನ್ಯಾಸಕರು?

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS  

 ಶಿವಮೊಗ್ಗದಲ್ಲಿ ವಿನೋಬನಗರ ಸಮೀಪ ಸಿಗುವ ರೈಲ್ವೆ ಟ್ರ್ಯಾಕ್​ನ ಬಳಿಯಲ್ಲಿ ತಾಳಗುಪ್ಪ ಟ್ರೈನ್​ಗೆ ತಲೆಕೊಟ್ಟು ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಇವತ್ತು ಬೆಳಗ್ಗೆ ತಾಳಗುಪ್ಪ ಟ್ರೈನ್​ಗೆ ಸಿಲುಕಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ಬಳಿಕ ಈ ಪ್ರಕರಣ ಆತ್ಮಹತ್ಯೆ ಎಂದು ತಿಳಿದು ಬಂದಿದೆ.  

ಮೃತರು ಶಿವಮೊಗ್ಗದ ಡಿವಿಎಸ್​ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ 70 ವರ್ಷ ವಿಶ್ವನಾಥ್ ಎಂದು ತಿಳಿದುಬಂದಿದೆ. ಮೃತದೇಹ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆ ಯ ಶವಗಾರದಲ್ಲಿ ಇರಿಸಲಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.


ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್​ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್​ ಹೆಲ್ಮೆಟ್​ ಜಪ್ತಿ! ಕಾರಣವೇನು?

ಶಿವಮೊಗ್ಗ ಟ್ರಾಫಿಕ್​ ಪೊಲೀಸರು ಮಳೆಯಲ್ಲಿಯು ಸಂಚಾರ ನಿಯಮ ಪಾಲನೆಗೆ ಸಂಬಂಧಿಸಿದಂತೆ ಅಭಿಯಾನ ಕೈಗೊಂಡಿದ್ದಾರೆ. ನಗರದ ಪ್ರಮುಖ ಸರ್ಕಲ್​ಗಳಲ್ಲಿ ನಿಂತು ಹೆಲ್ಮೆಟ್​ಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಐಎಎಸ್​ ಮಾರ್ಕ್​ ಇಲ್ಲದ ಹೆಲ್ಮೆಟ್ ಹಾಗೂ ಹಾಫ್ ಹೆಲ್ಮೆಟ್​ಗಳನ್ನು ಹಾಕಿಕೊಂಡು ಬೈಕ್​ನಲ್ಲಿ ಸಂಚರಿಸುವವರನ್ನ ತಡೆದು ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದು ಜಾಗೃತಿ ಮೂಡಿಸುತ್ತಿದ್ದಾರೆ. 

ಇತ್ತೀಚೆಗೆ ಶಿವಮೊಗ್ಗದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದ. ಆತ ಹಾಕಿದ್ದ ಹಾಫ್ ಹೆಲ್ಮೆಟ್​ ಆತನ ಜೀವ ಉಳಿಸುವುದಕ್ಕೆ ನೆರವಾಗಿರಲಿಲ್ಲ. ಈ ಘಟನೆ ಬೆನ್ನಲ್ಲೆ ಶಿವಮೊಗ್ಗ ಸಂಚಾರಿ ಪೊಲೀಸರು ಹೆಲ್ಮೆಟ್ ಅಭಿಯಾನವನ್ನು ಆರಂಭಿಸಿದ್ದಾರೆ. 

ಈ ಸಂಬಂಧ ಶಿವಪ್ಪನಾಯಕರ ಪ್ರತಿಮೆ ಸಮೀಪ ಕಾರ್ಯಾಚರಣೆ ಆರಂಭಿಸಿದ ಟ್ರಾಫಿಕ್ ಪೊಲೀಸರು ಕಾಟಚಾರಕ್ಕೆ ಹಾಕುತ್ತಿದ್ದ ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದಿದ್ಧಾರೆ. ಅರ್ಧ ಗಂಟೆಯ ಅವಧಿಯಲ್ಲಿಯೇ ನೂರಕ್ಕೂ ಹೆಚ್ಚು ಹೆಲ್ಮೆಟ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಈ ಸಂದರ್ಭದಲ್ಲಿ ಐಎಎಸ್​ ಮಾರ್ಕ್​ ಇರುವ ಹೆಲ್ಮೆಟ್​ಗಳನ್ನು ಏಕೆ ಧರಿಸಬೇಕು ಮತ್ತು ಅದರ ಉಪಯೋಗವೇನು? ಏತ್ತಕ್ಕಾಗಿ ಈ ಅಭಿಯಾನ ಎಂಬುದನ್ನ ವಾಹನ ಸವಾರರಿಗೆ ವಿವರಿಸಿದ್ದಾರೆ.

ಇನ್ನೂ ಕಳಪೆ ಗುಣಮಟ್ಟ ಹೆಲ್ಮೆಟ್​ಗಳನ್ನು ಧರಿಸಿಕೊಂಡು ಬಂಧ ವಾಹನಸವಾರರಿಗೆ ಪೊಲೀಸರ ಈ  ಕಾರ್ಯಾಚರಣೆ ಕಿರಿಕಿರಿ ಮಾಡಿತ್ತು. ಅಲ್ಲದೆ ಇದೇ ವಿಚಾರವಾಗಿ ಪೊಲೀಸರ ಜೊತೆ ಕೆಲವರು ವಾಗ್ವಾದಕ್ಕೂ ಇಳಿದಿದ್ದರು. ಎಲ್ಲರಿಗೂ ತಾಳ್ಮೆಯಿಂದ ಉತ್ತರಿಸುತ್ತಿದ್ದ ಪೊಲೀಸರು, ಇವತ್ತು ಹೆಲ್ಮೆಟ್ ವಿಚಾರದಲ್ಲಿ ದಂಡ ವಿಧಿಸಲಿಲ್ಲ. ಇನ್ಮುಂದೆ ಹಾಫ್ ಹೆಲ್ಮೆಟ್ ಧರಿಸಿದಲ್ಲಿ ದಂಢ ವಿಧಿಸುವುದಾಗಿ ಎಚ್ಚರಿಸಿದ್ದಾರೆ. 

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​