ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯೊಂದರ ಗೇಟ್ ಅನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಶಾಲೆಯ ದಾಖಲೆಗಳನ್ನು ನಾಶಪಡಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಆಗಸ್ಟ್ 16 ರಂದು ನಡೆದಿದ್ದು, ತಡವಾಗಿ ತಿಳಿದುಬಂದಿದೆ.
ದುಷ್ಕರ್ಮಿಗಳು ಶಾಲೆಯ ಕಬ್ಬಿಣದ ಗೇಟ್‌ನ ಸಲಾಕೆಗಳನ್ನು ಬಗ್ಗಿಸಿ ಒಳಗೆ ಪ್ರವೇಶಿಸಿದ್ದಾರೆ. ನಂತರ ಶಾಲೆಯೊಳಗಿನ ಕಪಾಟುಗಳ ಬಾಗಿಲುಗಳನ್ನು ಮುರಿದು ಹಾಕಿ, ಶಾಲಾ ದಾಖಲೆಪತ್ರಗಳಿಗೆ ಹಾನಿ ಮಾಡಿದ್ದಾರೆ. ಈ ಕೃತ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಇವಿರ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಅಬ್ಬಬ್ಬಾ ಅಚ್ಚರಿಯ ಮಳೆ! ತುಂಗಾ 73, ಲಿಂಗನಮಕ್ಕಿ 59, ಭದ್ರಾ 34 ಸಾವಿರ ಕ್ಯೂಸೆಕ್ ನೀರು! https://malenadutoday.com/malnad-rain-and-dam-levels/
Doddapete police
