ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!

Shivamogga case solved  ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಗಾಡಿನೂ ಇಲ್ಲ! ರೆಕಾರ್ಡೂ ಇಲ್ಲ! ದುಡ್ಡು ಇಲ್ಲ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE

ಶಿವಮೊಗ್ಗದ ನನ್ನ ಓದುಗ ದೊರೆಗಳೇ ಇವತ್ತು ಭಾನುವಾರ, ರೆಸ್ಟ್​ನಲ್ಲಿರ್ತೀರಾ, ನಿಮ್ಮ ರೆಸ್ಟ್​ ಡೇನಲ್ಲಿ ನಿಮಗೊಂದಿಷ್ಟು ಮಾಹಿತಿ ಕೊಡೋಣ ಅಂತಾ ಈ ಸುದ್ದಿಯನ್ನು ಹೆಕ್ಕಿ ತಂದು ಬರೆಯುತ್ತಿದ್ದೇನೆ!

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಶಿವಮೊಗ್ಗ ಇನ್ನೂ ದುಬಾರಿ ದುನಿಯಾ ಆಗಿಲ್ಲ. ಮಹಾನಗರಗಳಿಗೆ ಹೋಲಿಸಿಕೊಂಡರೆ ಮಾತ್ರ..

ಹಾಗಾಗಿ ದುಬಾರಿ ದುನಿಯಾಗಳ ಹಳೇಗಾಡಿಗಳು ಇಲ್ಲಿ ಹಾಫ್ ರೇಟ್​ ಚಿಫ್​ ರೇಟ್​ಗೆ ಸೇಲಾಗುತ್ತದೆ.

ಅದರಲ್ಲೂ ಕಂಡೀಷನ್​ ಇರುವ ಗಾಡಿಗಳನ್ನು ಜನರೇ ಕೊಂಡು ಕೊಳ್ಳುತ್ತಾರೆ. ಅದಕ್ಕೆ ತಾರಾತಿಗಡಿ ವ್ಯವಹಾರ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.

ಆದರೆ ಕೆಲವೊಂದು ಗಾಡಿಗಳ ವ್ಯವಹಾರದ ಹಿಂದೆ ನಡೆಯುವ ಸೈಲೆಂಟ್ ಮೋಸ ಎಷ್ಟೊ ಜನರಿಗೆ ಅರ್ಥವಾಗಿರೋದಿಲ್ಲ. ಅರ್ಥವಾಗುವ ಹೊತ್ತಿಗೆ ಕೈಯಲ್ಲಿರುವ ದುಡ್ಡು ಕಳ್ಕೊಂಡು ಅಲೆದಾಡೋದಕ್ಕೆ ಆರಂಭಿಸಿರುತ್ತಾರೆ.

ಸೆಕೆಂಡ್​ ವೆಹಿಕಲ್​ ಮತ್ತು ಮೋಸ

ನಾವು ದುಡ್ಡು ಕೊಡ್ತೀವಿ, ಅವರು ಗಾಡಿ ಕೊಡ್ತಾರೆ, ಅದರಲ್ಲಿ ಮೋಸವೇನು ಬಂತು! ಖಂಡಿತ ಇಲ್ಲ, ಸೆಕಂಡ್ ಹ್ಯಾಂಡ್ ವ್ಯಾಪಾರದಲ್ಲಿ ಬರಿಯಿಷ್ಟೆ ನಡೆಯುವುದಿಲ್ಲ. ಎಲ್ಲರೂ ಪ್ರಾಮಾಣಿಕರಾಗಿ ಇರುವುದಿಲ್ಲ.

ಗೃಹಚಾರಕ್ಕೆ ಕೆಲವರು ಮೋಸವನ್ನೆ ವ್ಯಾಪಾರ ಮಾಡಿಕೊಂಡಿರುತ್ತಾರೆ. ಅಂತಹವರನ್ನ ನಂಬಿ ಮೋಸ ಹೋಗುವ ಬದಲು, ಎಚ್ಚರಿಕೆ ವಹಿಸಿ ಗ್ರಾಹಕರೇ ಎಂಬುದು ಈ ಸ್ಟೋರಿ ಉದ್ದೇಶ..

ಗೃಹಸಚಿವರ ಸೂಚನೆ, ಎಸ್​ಪಿ ವಹಿಸಿದ್ರು ಗಮನ

ಶಿವಮೊಗ್ಗದಲ್ಲಿ ಸೆಕೆಂಡ್​ ಹ್ಯಾಂಡ್ ವೆಹಿಕಲ್​ಗಳ ವ್ಯಾಪಾರ ಸಾಧಾರಣ ಮಟ್ಟಿಗೆ ಒಂದೊಳ್ಳೆ ವಹಿವಾಟು ಕೇಂದ್ರವಾಗಿ ಮಾರ್ಪಟ್ಟಿದೆ.

ಆದರೆ ಈ ವಹಿವಾಟಿನಲ್ಲಿ ಕೆಲವರು ಕೆಟ್ಟ ಹೆಸರು ತರುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಅಂತಹ ವ್ಯಾಪಾರಿಗಳನ್ನು ತಮ್ಮ ವ್ಯಾಪ್ತಿಯಿಂದ ದೂರ ಇಡಬೇಕಾಗಿದ್ದು, ಪ್ರಾಮಾಣಿಕ ವಹಿವಾಟುದಾರರ ಜವಾಬ್ದಾರಿಗೆ ಬಿಟ್ಟಿದ್ದು.

ಈ ನಿಟ್ಟಿನಲ್ಲಿ ಖುದ್ದು ಗೃಹಸಚಿವರೇ ಸಂತ್ರಸ್ತರಿಗಾದ ಅನ್ಯಾಯವೊಂದನ್ನು ಪ್ರಸ್ತಾಪಿಸಿ, ಅದನ್ನ ಎಸ್​ಪಿ ಲಕ್ಷ್ಮೀಪ್ರಸಾದ್ ತಮ್ಮ ಗಮನಕ್ಕೆ ತರಿಸಿಕೊಂಡು, ಕೊನೆಗೆ ದುಡ್ಡು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದ ಸಂತ್ರಸ್ತರೊಬ್ಬರು ಸಮಸ್ಯೆಯಿಂದ ಮುಕ್ತವಾದ ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ..

ನಡೆದಿದ್ದು ನಡೆದ ಹಾಗೆ!!

ಅವರ ಹೆಸರು ಅಭಿಲಾಷ್​, ಬೇರೆ ಊರಿನವರು, ಸೆಕೆಂಡ್​ ಬ್ರೇಜಾ ಕಾರು ತಗೋಬೇಕು ಅಂತಾ ಕೈಲಿ ಒಂದು ಐದು ಲಕ್ಷ ಕ್ಯಾಶ್ ಇಟ್ಕೊಂಡು ಹುಡುಕುತ್ತಿದ್ರು.

ಅವರಿಗೆ ಇವರಿಗೆ ಹೇಳಿಯು ಇದ್ದರು. ಎಲ್ಲಾದರೂ ಗಾಡಿ ಇದ್ರೆ ತಿಳಿಸಿ ಎಂದು ಸ್ನೇಹಿತರ ಬಳಿಯು ತಿಳಿಸಿದ್ರು.

ಈ ಮಧ್ಯೆ ಶಿವಮೊಗ್ಗದಲ್ಲಿ ಒಬ್ಬರು ಮಧ್ಯವರ್ತಿ ಅಭಿಲಾಷ್​​ರನ್ನು ಭೇಟಿ ಮಾಡಿ ತಮಗೆ ಪರಿಚಯ ಇದ್ದವರ ಒಂದು ಬ್ರೆಜಾ ಕಾರಿದೆ. ಅವರ ಮಗಳ ಮದುವೆಯಂತೆ, ಹಾಗಾಗಿ ಅದನ್ನು ಅವರು ಮಾರುತ್ತಿದ್ದಾರೆ. ಬೇಕಾದರೆ ನೋಡಿ ಎಂದಿದ್ದಾರೆ. ಅಭಿಯವರು ಸಹ ಆಯ್ತು ನೋಡೋಣ ಅಂತಾ ವೆಹಿಕಲ್​ ನೋಡಿದ್ದಾರೆ.

ರ್​ಸಿ ಬೇರೆ ಹೆಸರಲ್ಲಿತ್ತು, ಗಾಡಿ ಮೇಲೆ ಲೋನಿತ್ತು

ಒಬ್ಬರು ಬ್ರೋಕರ್​ ಮತ್ತೊಬ್ಬರು ಓನರ್​, ಅಭಿಲಾಷ್​​ರನ್ನು ಭೇಟಿಯಾಗಿದ್ದಾರೆ. ಬ್ರೇಜಾ ಗಾಡಿಯನ್ನು ನೋಡಿದ್ದಾರೆ. ಅದರ ಮೂಲ ಓನರ್​ ರಾಮನಗರದವರಾಗಿದ್ರು. ಆರ್​ಸಿಯು ಅವರ ಹೆಸರಲ್ಲಿಯೇ ಇತ್ತು. ಗಾಡಿ ಮೇಲೆ ಲೋನ್​ ಇತ್ತು. ಇದನ್ನ ಅಭಿಲಾಷ್​ ವಿಚಾರಿಸಿದ್ದಾರೆ.

ಎಲ್ಲದಕ್ಕೂ ಉತ್ತರವೂ ಸಿದ್ಧವಾಗಿತ್ತು!

ಅಭಿಲಾಷ್​ ಕೇಳಿದ ಪ್ರಶ್ನೆಗೆ ಗಾಡಿ ಕೊಡುತ್ತೇನೆ ಎಂದ ಓನರ್​, ಇದು ಇನ್ನೂ ನನ್ನ ಹೆಸರಿಗೆ ಮಾಡಿಕೊಂಡಿಲ್ಲ. ಗಾಡಿ ತೆಗೆದುಕೊಂಡು 18 ದಿನದಲ್ಲಿ ನಿಮಗೆ ಸಿಸಿ ಮಾಡಿ ಕೊಡುತ್ತೇನೆ. ಈಗಲೇ ಮಾಡಿದರೆ ಓನರ್​ ಹೆಸರು ಒಂದು ಜಾಸ್ತಿಯಾಗುತ್ತೆ ಎಂದಿದ್ದಾರೆ.

ಅಲ್ಲದೆ ಲೋನ್​ ಕಟ್ಟಿದ್ದೇವೆ ಇಗೋ ನೋಡಿ ರಶೀದಿ. ಆದರೆ ಆರ್​ಟಿಓದಲ್ಲಿ ಲೋನ್​ ಕ್ಲಿಯರೆನ್ಸ್ ಇನ್ನೂ ಮಾಡಿಸಿಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಹೀಗೇ ಮಾತ್​ ಮಾತಲ್ಲೇ ಕ್ಲಿಯರ್​ ಆಗಿ ಬ್ರೇಜಾ ಗಾಡಿಯು ಓಕೆ ಆಯ್ತು. 48 ಸಾವಿರ ಅಡ್ವಾನ್ಸ್​ ಕೊಟ್ಟು, 8.88 ಕ್ಕೆ ವ್ಯಾಪಾರ ಮಾತಾಡಿ ಅಲ್ಲಿಂದ ಅಭಿಲಾಷ್​ ವಾಪಸ್ ಆಗಿದ್ದಾರೆ. ಬಳಿಕ 2-3 ದಿನ ಬಿಟ್ಟು ಸ್ವಲ್ಪ ಅಕೌಂಟ್​ಗೆ, ಸ್ವಲ್ಪ ಕ್ಯಾಶ್​ ಕೊಟ್ಟು ಇಲ್ಲೆ ಶಿವಮೊಗ್ಗದ ಪ್ರತಿಷ್ಟಿತ ಹೋಟೆಲ್​ವೊಂದರಲ್ಲಿ ವ್ಯವಹಾರ ಮುಗಿಸಿ ಕಾರು ಖರೀದಿಸಿದ್ದಾರೆ.

ಈ ಮಧ್ಯೆ ಅಕೌಂಟ್​ಗೆ ದುಡ್ಡು ಹಾಕುವಾಗಲೂ ಬೇರೆಯವರ ಅಕೌಂಟ್​ಗೆ ದುಡ್ಡು ಹಾಕಿಸಿಕೊಂಡಿದ್ದಾರೆ.

ತಿಂಗಳ ಬಳಿಕ ಗೊತ್ತಾಯ್ತು ಬಂಡವಾಳ

ಹಾಗೂ ಹೀಗೂ ಪ್ರತಿಷ್ಟಿತ ಹೋಟೆಲ್​ನಲ್ಲಿ ಸೆಕೆಂಡ್ ಹ್ಯಾಂಡ್ ಬ್ರೇಜಾ ಗಾಡಿ ಖರೀದಿಸಿದ ಅಭಿಲಾಷ್ ಖುಷಿಯಿಂದಲೇ ತೆರಳಿದ್ದರು.

ಆದರೆ ತಿಂಗಳ ಬಳಿಕ ಅವರಲ್ಲಿದ್ದ ಖುಷಿಯೆಲ್ಲವೂ ಹೋಗಿ ಚೂರು ಕೂಡ ನೆಮ್ಮದಿ ಇಲ್ಲದಂತೆ ಆಗಿತ್ತು. ಏಕೆಂದರೆ, ಅವರಿಗೆ ನಡೆದ ಘಟನೆಯ ಹಿಂದಿನ ಅಸಲಿ ಸತ್ಯ ಗೊತ್ತಾಗಿ ಹೋಗಿತ್ತು.

ಏನೆಂದರೆ, ಗಾಡಿ ರೆಕಾರ್ಡ್ಸ್​ಗಾಗಿ ಕರೆ ಮಾಡಿದರೇ, ಗಾಡಿ ಕೊಟ್ಟಿದ್ದ ಬ್ರೋಕರ್​ ಹಾಗೂ ಓನರ್​ ಇಬ್ಬರು ಅವರನ್ನ ಕೇಳಿ ಇವರನ್ನ ಕೇಳಿ ಪರಸ್ಪರ ಆಟವಾಡಿಸಲು ಶುರುಮಾಡಿದ್ದಾರೆ.

ಅನುಮಾನ ಬಂದು ಪರಿಶೀಲಿಸಿದಾಗ 8.88 ಕ್ಕೆ ವ್ಯಾಪಾರ ಆಗಿದ್ದ ಗಾಡಿ ಮೇಲೆ 9 ಲಕ್ಷದ 25 ಸಾವಿರ ಲೋನ್​ ಇದೆ ಎಂಬುದು ಗೊತ್ತಾಗಿದೆ. ಅಂದರೆ ಈ ಹಿಂದೆ ತೋರಿಸಿದ್ದ ರಶೀದಿಯು ಸಹ ಫೇಕ್​ ಆಗಿತ್ತು.

ಅಯ್ಯೋ ದೇವರೆ ಕಡೆಗೆ!?

ಇಷ್ಟೆಲ್ಲಾ ಆಗುವ ಹೊತ್ತಿಗೆ ಅಭಿಲಾಷ್​ಗೆ ತಮಗೆ ಮೋಸವಾಗಿರುವುದು ಗೊತ್ತಾಗಿದೆ. ಹಾಗಾಗಿ ಗಾಡಿಯ ಮೂಲ ಓನರ್​ರನ್ನ ಹುಡುಕಿ ಸಂಪರ್ಕಿಸಿದ್ದಾರೆ.

ರಾಮನಗರದಲ್ಲಿ ಸಿಕ್ಕ ಅವರು, ನೋಡಿ ಸರ್ ನಾನು ಲಾಸ್ ಆಗಿದ್ದೆ, ನನ್ನ ವಾಹನ ಸೀಜ್​ ಮಾಡಿಕೊಂಡು ಹೋಗಿದ್ದರು.

ಜೊತೆಯಲ್ಲಿ ನನ್ನಲ್ಲಿದ್ದ ಅಸಲಿ ಡ್ಯಾಕ್ಯುಮೆಂಟ್ ಕೂಡ ತೆಗೆದುಕೊಂಡು ಹೋಗಿದ್ದಾರೆ. ಗಾಡಿ ಬಿಡಿಸಿಕೊಳ್ಳುವ ಶಕ್ತಿಯಿಲ್ಲದಿದ್ದಕ್ಕೆ ಸುಮ್ಮನಿದ್ದೇನೆ ಎಂದಿದ್ದಾರೆ.

ಈ ಕಡೆ ಮೋಸ ಹೋಗಿದ್ದು ಒಂದು ಕಡೆಯಾದರೆ, ಇತ್ತ ಗಾಡಿಕೊಟ್ಟ ಓನರ್ ಹಾಗೂ ಬ್ರೋಕರ್​ ಇಬ್ಬರು ಕೂಡ ಅಭಿಲಾಷ್​ರನ್ನ ಆಟವಾಡಿಸೋಕೆ ಶುರುಮಾಡಿದ್ದಾರೆ.

ಕೊಟ್ಟಗಾಡಿಯ ರೆಕಾರ್ಡ್​ ಸರಿ ಮಾಡಿಕೊಡ್ರಿ, ಇಲ್ಲವೇ ನಮ್ಮ ಅಮೌಂಟ್ ಕೊಡಿ ಎಂದರು ಬೇಡಿಕೊಂಡರೂ, ಅವರಿಬ್ಬರು ರೆಸ್ಪಾನ್ಸ್ ಮಾಡಿಲ್ಲ.

ಹೀಗೆ ಐದು ತಿಂಗಳ ಕಾಲ ಅಭಿಲಾಷ್​ ಖರೀದಿಸಿದ ಬ್ರೇಜಾ ಗಾಡಿಯ ವಿಚಾರಕ್ಕೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ.

ಮುಂದೇನಾಯ್ತು!?

ಈ ಪ್ರಕರಣದಲ್ಲಿ ಗೃಹಸಚಿವರು ಯಾಕೆ ಎಂಟ್ರಿಕೊಟ್ರು! ಪ್ರಕರಣದಲ್ಲಿ ಅಭಿಲಾಷ್​ಗೆ ದುಡ್ಡು ಸಿಕ್ತಾ!? ಎಸ್​ಪಿ ಲಕ್ಷ್ಮೀಪ್ರಸಾದ್​ ಈ ವಿಚಾರದಲ್ಲಿ ಏನು ಸೂಚಿಸಿದ್ರು ಇವೆಲ್ಲವೂ ಇನ್ನಷ್ಟು ಇಂಟರ್​ಸ್ಟಿಂಗ್​ ಆಗಿವೆ. ಅದನ್ನ ಹೇಳುತ್ತೇವೆ ಸ್ನೆಹಿತರೇ ಕೆಲವೆ ಕ್ಷಣಗಳಲ್ಲಿ ಈ ಸ್ಟೋರಿಯ ಮುಂದಿನ ಪಾರ್ಟ್​ ಇಲ್ಲೆ ಕೆಳಗೆ ಲಿಂಕ್​ನಲ್ಲಿ ಇದೆ ಓದಿ!

Leave a Comment