ಪ್ರಯಾಣಿಕರಲ್ಲಿ ವಿನಂತಿ/ 2 ದಿನ ಸರ್ಕಾರಿ ಸಾರಿಗೆ ಬಸ್​ ಸಂಚಾರದಲ್ಲಿ ವ್ಯತ್ಯಯ!

Disruption in government transport bus traffic for 2 days!

ಪ್ರಯಾಣಿಕರಲ್ಲಿ ವಿನಂತಿ/  2 ದಿನ ಸರ್ಕಾರಿ ಸಾರಿಗೆ ಬಸ್​ ಸಂಚಾರದಲ್ಲಿ ವ್ಯತ್ಯಯ!

KARNATAKA NEWS/ ONLINE / Malenadu today/ May 6, 2023 GOOGLE NEWS

ಶಿವಮೊಗ್ಗ Karnataka election/ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ- 09 ಮತ್ತು 10 ರಂದು ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು; ಸಹಕರಿಸಲು ಸಾರಿಗೆ ನಿಗಮ ಮನವಿ ಮಾಡಿದೆ. 

ಮೇ-10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣಾ ಸಿಬ್ಬಂದಿಗಳನ್ನು ಕರೆದೊಯ್ಯಲು  ಕ.ರಾ.ರ.ಸಾ.ನಿಗಮ ಶಿವಮೊಗ್ಗ ವಿಭಾಗದ ವತಿಯಿಂದ 262 ಬಸ್‍ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಒದಗಿಸಲಾಗುತ್ತಿದೆ. 

ಆದ್ದರಿಂದ ಮೇ-09 ಮತ್ತು 10 ರಂದು ಜಿಲ್ಲಾ ವ್ಯಾಪ್ತಿಯ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ನಿಗಮದೊಂದಿಗೆ ಸಹಕರಿಸುವಂತೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿರುತ್ತಾರೆ.

ಬಿಜೆಪಿಗೂ ತಟ್ಟಿದ ಕೇಸ್/ ಅಮಿತ್ ಶಾ ರೋಡ್​ ಶೋ ಕಾರ್ಯಕ್ರಮದ ವಿಚಾರದಲ್ಲಿ ದಾಖಲಾಯ್ತು ಎಫ್​ಐಆರ್

ಶಿವಮೊಗ್ಗ/ ರಾಜ್ಯ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಸಾಲು ಸಾಲ ಎಫ್​ಐಆರ್​ಗಳು ರಿಜಿಸ್ಟರ್ ಆಗುತ್ತಿವೆ. ಮತಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಸಂಬಂಧ ಜೆಡಿಎಸ್​, ಉತ್ತಮ ಪ್ರಜಾಕೀಯದ ಅಭ್ಯರ್ಥಿ ವಿರುದ್ಧ ಕೇಸ್ ಆದ ಬೆನ್ನಲ್ಲೆ ಇದೀಗ ಬಿಜೆಪಿ ರಾಷ್ಟ್ರೀಯ ಮುಖಂಡ ಕೇಂದ್ರ ಗೃಹಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ರೋಡ್​ ಶೋ ಸಂಬಂಧ ಕೇಸ್​ವೊಂದು ದಾಖಲಾಗಿದೆ. 

ದಿನಾಂಕ: 01-05-2023 ರಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಕೇಂದ್ರ ಗೃಹ ಸಚಿವ  ಅಮಿತ್ ಶಾ ರವರ  ರೋಡ್ ಶೋ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಳಾಗಿತ್ತು. 

ಬಿಹೆಚ್ ರಸ್ತೆಯ ಶಿವಪ್ಪ ನಾಯಕ ಸರ್ಕಲ್ ನಿಂದ ಲಕ್ಷ್ಮಿ ಟಾಕೀಸ್ ವೃತ್ತದವರೆಗೆ ಈ ರೋಡ್​ ಶೋ ಅದ್ದೂರಿಯಾಗಿ ನಡೆದಿತ್ತು.  ಈ ವೇಳೆ ಚುನಾವಣಾ ಪ್ರಚಾರಕ್ಕೆ 4-5 ಜನ ಮಕ್ಕಳನ್ನ ಬಳಸಿಕೊಳ್ಳಲಾಗಿದೆ ಎಂಬ ಆರೋಪದಡಿ ಎಫ್​ಐಆರ್ ದಾಖಲಾಗಿದೆ. 

ಬಿಜೆಪಿ ಪಕ್ಷದ ಬಾವುಟ ಮತ್ತು ಪಕ್ಷದ ಚಿಹ್ನೆಗಳಿರುವ ಶಾಲ್ ಗಳನ್ನು  ಮಕ್ಕಳಿಗೆ ಕೊಟ್ಟು ಅವರನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ರೋಡ್ ಶೋ ಕಾರ್ಯಕ್ರಮಕ್ಕೆ ಬಳಸಿಕೊಂಡಿರುವುದು ವಿಡಿಯೋ ಸರ್ವೆಲೆನ್ಸ್ ತಂಡದವರು ಮಾಡಿರುವ ವಿಡಿಯೋ ಚಿತ್ರೀಕರಣದಲ್ಲಿ ಕಂಡು ಬಂದಿದೆ. 

ಚುನಾವಣಾ ಪ್ರಚಾರದಲ್ಲಿ, ಚಿಕ್ಕ ಮಕ್ಕಳನ್ನು ಬಳಸಿಕೊಳ್ಳುವುದು CHILD LABOUR (PROHIBITION & REGULATION) ACT, 1986 (U/s-14) ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಫ್ಲೈಯಿಂಗ್​ ಸ್ಕ್ವ್ಯಾಡ್​ ತಂಢದ ಅಧಿಕಾರಿಗಳು  ಪರಿಶೀಲನೆ ನಡೆಸಿ ಕಾನೂನ ಕ್ರಮಕ್ಕೆ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಆನಂದಪ್ಪ ಎಂಬ ಅಧಿಕಾರಿ ದೂರು ನೀಡಿದ್ದು, ಬಿಜೆಪಿ ಪಕ್ಷದ ಕಾರ್ಯದರ್ಶಿ ವಿರುದ್ಧ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್  ಆಗಿದೆ. 

Malenadutoday.com Social media