Astrology Predictions ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರದ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸದ ಈ ದಿನದ ಪಂಚಾಂಗ.. ಚತುರ್ದಶಿ ತಿಥಿಯು ಮುಂಜಾನೆ 4.24 ರವರೆಗೆ ಇರಲಿದೆ. ಅನುರಾಧಾ ನಕ್ಷತ್ರವಿದ್ದು ಆನಂತರ ಜ್ಯೇಷ್ಠಾ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ಬೆಳಿಗ್ಗೆ 8.46 ರಿಂದ 10.35 ರವರೆಗೆ ಇರುತ್ತದೆ. ರಾಹುಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಹಾಗೂ ಯಮಗಂಡ ಕಾಲವು ಬೆಳಿಗ್ಗೆ 6.00 ರಿಂದ 7.30 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
Astrology Predictions ಮೇಷ : ಕೆಲವು ಕೆಲಸಗಳನ್ನು ಅನಿವಾರ್ಯವಾಗಿ ರದ್ದುಗೊಳಿಸಬೇಕಾಗಬಹುದು. ದೂರದ ಪ್ರಯಾಣ, ಅನಾರೋಗ್ಯ. ಕುಟುಂಬದ ಸದಸ್ಯರೊಂದಿಗೆ ಸಣ್ಣ ವಿಷಯಗಳಿಗೆ ಭಿನ್ನಾಭಿಪ್ರಾಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ವೃಷಭ : ಹೊಸ ಭರವಸೆಯ ದಿನ. ಕೈಗೆತ್ತಿಕೊಂಡ ಹೊಸ ಕೆಲಸಯಶಸ್ವಿಯಾಗಿ ಆರಂಭವಾಗಲಿವೆ. ಹಳೆಯ ಕಲಹಗಳು ಇಂದು ಸಂಧಾನದ ಮೂಲಕ ಬಗೆಹರಿಯಲಿವೆ. ಶುಭ ಸಮಾರಂಭಗ. ಹಳೆಯ ಬಾಕಿ ವಸೂಲಾಗುವ ಲಕ್ಷಣಗಳಿದ್ದು, ವ್ಯಾಪಾರದಲ್ಲಿ ಆಶಾದಾಯಕ ಬೆಳವಣಿಗೆ ಉದ್ಯೋಗದಲ್ಲಿ ಸಂತೋಷ.
ಡಿಸೆಂಬರ್ 18 2025ರ ರಾಶಿ ಭವಿಷ್ಯ ದ್ವಾದಶ ರಾಶಿಗಳ ಫಲ ಮತ್ತು ಇಂದಿನ ಪಂಚಾಂಗ Daily Horoscope December 18 2025 Astrology Predictions and Panchangam details for all Zodiac Signs
ಮಿಥುನ : ನೂತನ ಅವಕಾಶ. ಬಾಲ್ಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ,ಉತ್ಸಾಹದಿಂದ ಸಮಯ ಕಳೆಯಲಿದ್ದೀರಿ. ಹೊಸ ಒಪ್ಪಂದ, ವ್ಯಾಪಾರದಲ್ಲಿ ಧನಲಾಭ, ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲಕರ.
ಕರ್ಕಾಟಕ : ಆರ್ಥಿಕ ಶಿಸ್ತು ಅತ್ಯಗತ್ಯ, ಆದಾಯಕ್ಕಿಂತ ಹೆಚ್ಚಿನ ಖರ್ಚು. ಕೌಟುಂಬಿಕ ವಲಯದಲ್ಲಿ ಸಣ್ಣಪುಟ್ಟ ಸಂಘರ್ಷ. ಧಾರ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ.. ನೆಂಟರಿಷ್ಟರ ಆಗಮನ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿನ ಕಿರಿಕಿರಿ, ವ್ಯಾಪಾರದಲ್ಲಿ ವಿಶೇಷ ದಿನ.
ಸಿಂಹ : ಅಂದುಕೊಂಡ ಫಲಿತಾಂಶ ಸಿಗದಿರಬಹುದು. ಆಸ್ತಿ ವಿಚಾರವಾಗಿ ತಗಾದೆ ಎದುರಾಗುವ ಸಂಭವವಿದೆ. ಸಂಬಂಧಿಕರೊಂದಿಗೆ ಮನಸ್ತಾಪ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಪ್ರಯಾಣ, ದೈವಿಕ ಚಿಂತನೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯದಿನ.
ಕನ್ಯಾ : ಅತ್ಯಂತ ಶುಭಪ್ರದ.ಕೈಗೆತ್ತಿಕೊಂಡ ಪ್ರತಿಯೊಂದು ಕಾರ್ಯದಲ್ಲೂ ವಿಜಯ, ಶುಭ ವಾರ್ತೆ. ಅನಿರೀಕ್ಷಿತ ಮೂಲಗಳಿಂದ ಹೆಚ್ಚಿನ ಧನಾಗಮನ. ಸಾರ್ವಜನಿಕವಾಗಿ ಗೌರವ ಹಾಗೂ ಸನ್ಮಾನ ದೊರೆಯಲಿವೆ. ಕೆಲಸಕ್ಕಾಗಿ ಹುಡುಕಾಟ, ವೃತ್ತಿಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಳ್ಳುವಿರಿ , ಉದ್ಯೋಗದಲ್ಲಿ ಸಾಮಾನ್ಯ ದಿನ

ತುಲಾ: ಆರ್ಥಿಕವಾಗಿ ಸ್ವಲ್ಪ ಸವಾಲಿನಿಂದ ಕೂಡಿದ ದಿನ. ಆರ್ಥಿಕ ಮುಗ್ಗಟ್ಟು ಕಾಡಬಹುದು. ಕೆಲಸ ಕಾರ್ಯ ಅಂದುಕೊಂಡ ವೇಗದಲ್ಲಿ ಸಾಗದೆ ಮಂದಗತಿಯಲ್ಲಿ ಸಾಗಲಿವೆ. ದೈಹಿಕವಾಗಿ ಸ್ವಲ್ಪ ಬಳಲಿಕೆ, ಒತ್ತಡಗಳಿಗೆ ಮಣಿಯಬೇಕಾದ ಪರಿಸ್ಥಿತಿ ಬರಬಹುದು. ಉದ್ಯೋಗ ವ್ಯಾಪಾರದಲ್ಲಿ ಕೆಲಸದ ಒತ್ತಡ
ವೃಶ್ಚಿಕ: ದೂರದ ಊರುಗಳಿಂದ ಮಹತ್ವದ ಸಂದೇಶ. ವ್ಯಾಪಾರಕ್ಕೆ ಸಂಬಂಧಿಸಿದ ಹೊಸ ವಿಚಾರ ನಡೆಯಲಿದೆ, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆದು ಯಶಸ್ವಿಯಾಗಲಿದ್ದಾರೆ. ಕೆಲಸ ಮಾಡುವ ಕಡೆ ಉತ್ತಮ ವಾತಾವರಣವಿದ್ದು, ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಲಿದೆ
ಸಾಗರ ಮಾರಿಕಾಂಬಾ ಜಾತ್ರೆಗೆ ಭರದ ಸಿದ್ದತೆ : ಮರ ಕಡಿಯುವ ಶಾಸ್ತ್ರ ಯಾವಾಗ ಗೊತ್ತಾ..?
ಧನುಸ್ಸು : ಅನಗತ್ಯ ಖರ್ಚು, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಮಿತ್ರರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ವೃತ್ತಿ ಜೀವನದಲ್ಲಿ ಸ್ವಲ್ಪ ನಿರಾಶಾದಾಯಕ ಬೆಳವಣಿಗೆ. ದೂರ ಪ್ರಯಾಣ, ಉದ್ಯೋಗದಲ್ಲಿ ಓಡಾಟ ಜಾಸ್ತಿ.
ಮಕರ : ಸಕಾರಾತ್ಮಕ ದಿನ, ಹೊಸ ಯೋಜನೆ ಆರಂಭಿಸಲು ಸೂಕ್ತ ಕಾಲ. ಮನೆಯಲ್ಲಿ ಮದುವೆಯಂತಹ ಶುಭ ಕಾರ್ಯಗಳ ಪ್ರಸ್ತಾಪ. ಬಹಳ ದಿನಗಳಿಂದ ಸತಾಯಿಸುತ್ತಿದ್ದ ಆಸ್ತಿ ವಿವಾದ ಅಂತಿಮ ಹಂತಕ್ಕೆ ಬರಲಿದೆ. ಹೊಸ ವಾಹನ ಖರೀದಿ, ದೇವಸ್ಥಾನಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಶುಭದಿನ

ಕುಂಭ : ಹಳೆಯ ಸಾಲದ ಹಣ ಅಥವಾ ಬರಬೇಕಾದ ಬಾಕಿ ಹಣವು ಕೈ ಸೇರಲಿದೆ. ಯಶಸ್ಸು ನಿಮ್ಮದಾಗಲಿದ್ದು, ಸಂತಸದ ಸುದ್ದಿಗಳನ್ನು ಕೇಳುವಿರಿ. ಹಳೆಯ ಗೆಳೆಯರೊಂದಿಗೆ ಸಂಜೆ ಕಳೆಯುವ ಸಾಧ್ಯತೆ. ಉದ್ಯೋಗದಲ್ಲಿ ಪ್ರಗತಿ, ವ್ಯವಹಾರದಲ್ಲಿ ಸಾಮಾನ್ಯದಿನ
ಮೀನ : ಮಾತಿನ ಮೇಲೆ ನಿಗಾ ಇಡುವುದು ಅವಶ್ಯಕ, ಕುಟುಂಬದವರೊಂದಿಗೆ ಕಲಹ. ಖರ್ಚು ವೆಚ್ಚ ಮಿತಿ ಮೀರುವ ಭೀತಿಯಿದ್ದು, ಸಾಲ ಮಾಡಬೇಕಾದ ಪರಿಸ್ಥಿತಿ. ಆಸ್ತಿ ಪಾಸ್ತಿ ವಿಚಾರದಲ್ಲಿ ತಗಾದೆ. ಮನೆ ನಿರ್ಮಾಣ ಅಥವಾ ದುರಸ್ತಿ ಕಾರ್ಯ. ಕೆಲಸದ ಸ್ಥಳದಲ್ಲಿ ಸಾಮಾನ್ಯ ದಿನ

ಸಿದ್ದಾಪುರ-ಹೊಸನಗರ ಹೆದ್ದಾರಿಯಲ್ಲಿ ಹೊಳೆಗೆ ಪಲ್ಟಿಯಾದ ಇಂಧನ ಲಾರಿ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!