ಶಿವಮೊಗ್ಗ : ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ ಟ್ರೈಲರ್ ಇಂದು ಸರಿಗಮಪ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿದೆ. 2 ನಿಮಿಷ 16 ಸೆಕೆಂಡ್ಗಳ ಈ ಟ್ರೈಲರ್ನಲ್ಲಿ ದರ್ಶನ್ ಅವರ ಡೆವಿಲ್ ದರ್ಶನವನ್ನು ತೆರೆದಿಡಲಾಗಿದೆ,

Darshan s Devil movie ಟ್ರೈಲರ್ನಲ್ಲಿ ನೆಗೆಟಿವ್ ಶೇಡ್ನಲ್ಲಿ ದರ್ಶನ್?
ಟ್ರೈಲರ್ ನೋಡಿದಾಗ ದರ್ಶನ್ ಅವರು ಈ ಚಿತ್ರದಲ್ಲಿ ನೆಗೆಟಿವ್ ಶೇಡ್ನಲ್ಲಿ ನಟಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಅವಲಕ್ಕಿ ಅವಲಕ್ಕಿ, ಕಾಂಚನ ಮಿನ ಮಿನ ಎಂಬ ಡೈಲಾಗ್ನೊಂದಿಗೆ ಆರಂಭವಾಗುವ ಈ ಟ್ರೈಲರ್ ಬಹಳ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರೀಕರಣದಲ್ಲಿ ಬಳಸಲಾದ ದುಬಾರಿ ಕಾರುಗಳು, ದರ್ಶನ್ ಅವರ ಕಾಸ್ಟ್ಯೂಮ್ ಸೇರಿದಂತೆ ಹಲವು ಅಂಶಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗುವ ಎಲ್ಲಾ ಸಾಧ್ಯತೆಗಳಿವೆ.
Darshan s Devil movie ಪವರ್ಫುಲ್ ಡೈಲಾಗ್ಗಳ ಅಬ್ಬರ
ಚಿತ್ರದ ಡೈಲಾಗ್ಗಳ ವಿಷಯಕ್ಕೆ ಬಂದರೆ, ಒಂದಕ್ಕಿಂತ ಒಂದು ಪವರ್ಫುಲ್ ಸಂಭಾಷಣೆಗಳನ್ನು ಬಳಸಲಾಗಿದೆ. ಲುಕ್ ಅಲ್ಲಿ ಅವ್ನು ಹೀರೋನ, ಕಿಕ್ ಅಲ್ಲಿ ಇದ್ರೆ ಫುಲ್ ಅನ್ ಟೆರರ್ ಮತ್ತು ನಾಯಕಿ ಹೇಳುವ ಕ್ಷಣಕೊಂದು ಬಣ್ಣ, ಗಳಿಗೆಗೊಂದು ವೇಷ. ನಿನ್ನ ನಿಜವಾದ ರೂಪವನ್ನು ನೋಡೇ ಇಲ್ಲ ಎಂಬ ಡೈಲಾಗ್ಗಳು ದರ್ಶನ್ ಹಲವು ಶೇಡ್ಗಳಲ್ಲಿ ನಟಿಸುತ್ತಿರುವುಡು ಪಕ್ಕ ಎಂಬಂತಿದೆ. ಇನ್ನೂ ಪಾತ್ರಧಾರಿಗಳ ವಿಚಾರಕ್ಕೆ ಬಂದರೆ, ಚಿತ್ರತಂಡ ಈ ಮೊದಲು ತಿಳಿಸಿದ ಅನೇಕ ನಟರು ಟ್ರೈಲರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಪ್ರಭಾವಿ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, “ನಾನ್ ಕೂತಿದ್ ಚೇರಿನಲ್ಲಿ ಬೇರೆಯಾರು ಕೂರಬಾರದು” ಎಂಬ ಡೈಲಾಗ್ ಹೇಳಿದ ಬಳಿಕ ಅಚ್ಯುತ್ ಕುಮಾರ್ ಕುಳಿತುಕೊಳ್ಳುವ ಸೀನ್ ಇದೆ. ಇದು ಕುರ್ಚಿಗಾಗಿ ನಡೆಯುವ ಕಾದಾಟವಿರುವ ಪೊಲಿಟಿಕಲ್ ಡ್ರಾಮಾ ಕಥಾಹಂದರವನ್ನು ಸೂಚಿಸುತ್ತದೆ. ಹಾಗೆಯೇ ಗಿಲ್ಲಿ ನಟ ವಿನಯ್ ಗೌಡ ಸೇರಿದಂತೆ ಅನೇಕ ಕಲಾವಿದರಿದ್ದಾರೆ.
ದರ್ಶನ್ ಅವರ ಪಾತ್ರದ ಹೆಸರು ಧನುಷ್ ಎಂದಿದ್ದು, ಅವರು ಸದಾ ಅಮಲಿನಲ್ಲಿರುವ ನೆಗೆಟಿವ್ ಶೇಡ್ ಪಾತ್ರವನ್ನು ನಿರ್ವಹಿಸುತ್ತಿರುವಂತೆ ಕಾಣಿಸಿದ್ದಾರೆ. ಅವರ ಸಿಗ್ನೇಚರ್ ರನ್ನಿಂಗ್ ಸ್ಟೈಲ್ ಕೂಡ ಟ್ರೈಲರ್ನಲ್ಲಿ ಗಮನ ಸೆಳೆದಿದೆ. ಸೂರ್ಯನಿಗೆ ಬಹಳಾ ಹೊತ್ತು ಗ್ರಹಣ ಹಿಡಿಯಲ್ಲ, ನಾನ್ ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್ನೊಂದಿಗೆ ಟ್ರೈಲರ್ ಕೊನೆಗೊಳ್ಳುತ್ತದೆ. ಒಟ್ಟಾರೆಯಾಗಿ, ‘ಡೆವಿಲ್’ ಟ್ರೈಲರ್ ಅದ್ದೂರಿ ಮತ್ತು ಸ್ಟೈಲಿಶ್ ಆಗಿ ಮೂಡಿಬಂದಿದೆ. ಚಿತ್ರದ ಬುಕ್ಕಿಂಗ್ ಡಿಸೆಂಬರ್ 06 ರಂದು ತೆರೆಯಲಿದ್ದು, ಡಿಸೆಂಬರ್ 11 ರಂದು ರಾಜ್ಯದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.
Darshan s Devil movie Trailer Review


