ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಡೆವಿಲ್ ಚಿತ್ರತಂಡ: ಬಿಡುಗಡೆ ದಿನಾಂಕದಲ್ಲಿ ಬದಲಾವಣೆ

prathapa thirthahalli
Prathapa thirthahalli - content producer

The Devil movie  : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ‘ದಿ ಡೆವಿಲ್’ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಕೊಂಚ ಬದಲಾವಣೆಯಾಗಿದ್ದು, ಚಿತ್ರತಂಡ ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ, ಈ ಹಿಂದೆ ಘೋಷಿಸಲಾಗಿದ್ದ ಡಿಸೆಂಬರ್ 12 ರ ಬದಲಾಗಿ ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11, 2025 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ‘ದಿ ಡೆವಿಲ್’ ತೆರೆಕಾಣಲಿದೆ.

The Devil movie Release Date Changed
The Devil movie Release Date Changed

ರಿಪ್ಪನ್‌ಪೇಟೆ : ನೇಣು ಬಿಗಿದುಕೊಂಡು  ಯುವಕ ಆತ್ಮಹತ್ಯೆ

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, “ಪ್ರೇಕ್ಷಕ ಪ್ರಭುಗಳ ಒತ್ತಾಯದ ಮೇರೆಗೆ, ನಿಮ್ಮ ‘ದಿ ಡೆವಿಲ್’ ಸಿನಿಮಾ 12/12/2025 ರ ಬದಲು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 11 ರಂದು ಬೆಳ್ಳಿತೆರೆಗೆ ಬರಲಿದೆ. ನಿಮ್ಮ ಪ್ರೀತಿ, ಅಭಿಮಾನವೇ ನಮ್ಮ ಶ್ರೀರಕ್ಷೆ” ಎಂದು ತಿಳಿಸಿದೆ.

ನಾಯಕಿಯಾಗಿ ರಚನಾ ರೈ ನಟಿಸಿರುವ ಈ ಚಿತ್ರಕ್ಕೆ ಮಿಲನಾ ಪ್ರಕಾಶ್ ಅವರು ನಿರ್ದೇಶನ ಮತ್ತು ಕಥೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮತ್ತು ಸುಧಾಕರ್ ಎಸ್. ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನಾಯಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಈ ಸಿನಿಮಾ 2024 ರ ಡಿಸೆಂಬರ್ 25 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ವಿಳಂಬವಾಗಿತ್ತು. ಇದೀಗ ಚಿತ್ರದ ರಿಲೀಸ್ ದಿನಾಂಕ ಅಧಿಕೃತಗೊಂಡಿದ್ದು, ಇನ್ನು ಕೇವಲ 19 ದಿನಗಳಲ್ಲಿ ಈ ಬಹುನಿರೀಕ್ಷಿತ ಸಿನಿಮಾ ಅಭಿಮಾನಿಗಳನ್ನು ತಲುಪಲಿದೆ.

The Devil movie

Malenadu Today

 

Share This Article