SHIVAMOGGA NEWS TODAY

ಸಿ ಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್  ಸೇರಿ ಕಾಂಗ್ರೆಸ್ ವಿಸರ್ಜನೆಗೆ ಪ್ರಯತ್ನಿಸುತ್ತಿದ್ದಾರೆ: ಕೆ.ಎಸ್. ಈಶ್ವರಪ್ಪ 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

KS Eshwarappa : ಶಿವಮೊಗ್ಗ ಮಹಾತ್ಮ ಗಾಂಧೀಜಿಯವರ ಕನಸಾಗಿದ್ದ ಕಾಂಗ್ರೆಸ್ ವಿಸರ್ಜನೆಯನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸೇರಿ ಪ್ರಯತ್ನಿಸುತ್ತಿದ್ದಾರೆ ಎಂದು  ಮಾಜಿ ಡಿಸಿಎಂ ಕೆ ಎಸ್​  ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

KS Eshwarappa
KS Eshwarappa

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಡೆವಿಲ್ ಚಿತ್ರತಂಡ: ಬಿಡುಗಡೆ ದಿನಾಂಕದಲ್ಲಿ ಬದಲಾವಣೆ

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು   ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಆಂತರಿಕ ಗೊಂದಲದಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯ ಪ್ರಶ್ನೆಯೇ ಇಲ್ಲ. ಯಾವ ಶಾಸಕರೂ ಕೂಡ ಡಿಸಿಎಂ ಅಥವಾ ಸಿಎಂ ಬಳಿ ರಸ್ತೆ ಅಭಿವೃದ್ಧಿಗಾಗಿ ಒಂದು ಜಲ್ಲಿ ಕಾಳನ್ನೂ ಕೇಳಲು ಧೈರ್ಯ ಮಾಡುತ್ತಿಲ್ಲ. ಶಾಸಕರಿಗೂ ಅಭಿವೃದ್ಧಿ ಬಗ್ಗೆ ಕೇಳುವ ಆಸಕ್ತಿ ಅಥವಾ ಧೈರ್ಯವಿಲ್ಲ. ಎಲ್ಲರೂ ಅಧಿಕಾರಕ್ಕಾಗಿ ನುಗ್ಗಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಭವಿಷ್ಯದ ಕುರಿತು ಮಾತನಾಡಿದ ಅವರು, ಇಡೀ ದೇಶದ ಭೂಪಟ ತೆಗೆದರೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಉಳಿದಿದೆ. ಇಂತಹ ಪರಿಸ್ಥಿತಿ ಬರುತ್ತದೆ ಅಂತಲೇ ಗಾಂಧೀಜಿಯವರು ಕಾಂಗ್ರೆಸ್ ಮುಚ್ಚುವ ಕನಸನ್ನು ಅವತ್ತೇ ಕಂಡಿದ್ದರು. ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವ ಬಗ್ಗೆ ಗಾಂಧೀಜಿ ಅಂದೇ ಹೇಳಿದ್ದರು. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರೇ ಸೇರಿ ವಿಸರ್ಜನೆಯ ಪ್ರಯತ್ನ ಮಾಡುತ್ತಿದ್ದಾರೆ. ಈ ಸರ್ಕಾರ ಆದಷ್ಟು ಬೇಗ ಬಿದ್ದು ಹೋಗುತ್ತದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದಿಲ್ಲ, ಇದು ಮುಗಿದು ಹೋಗುತ್ತೆ. ವಿಸರ್ಜನೆ ಆಗುತ್ತದೆ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ಮುಂದುವರೆದು, ಬಿಹಾರ ಚುನಾವಣಾ ಫಲಿತಾಂಶವನ್ನು ನೋಡಿ  ಕಾಂಗ್ರೆಸ್​ನವರು ಸುಮ್ಮನೆ ಆಗಿದ್ದಾರೆ. ಇಡೀ ದೇಶದಲ್ಲಿ 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಈಗ ಸಿಂಗಲ್ ಡಿಜಿಟ್‌ಗೆ ಬಂದಿದೆ. ಜನರು ಕಾಂಗ್ರೆಸ್ ತಿರಸ್ಕಾರದ ತೀರ್ಮಾನ ಮಾಡಿದ್ದಾರೆ. ತೆಲಂಗಾಣದಲ್ಲಿ ಉಳಿದಿರುವುದೇನಾಗುತ್ತೋ ನೋಡೋಣ ಎಂದರು. 

KS Eshwarappa Blames Siddaramaiah &DK Shivakumar

KS Eshwarappa

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.